
ಕಡಂದಲೆ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ
Saturday, June 21, 2025
ಮೂಡುಬಿದಿರೆ: ಜೇಸಿಐ ಮುಂಡ್ಕೂರು ಭಾರ್ಗವದ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಶ್ರೀ ಸುಬ್ರಹ್ಮಣ್ಯ ಪ್ರೌಢ ಶಾಲೆ ಕಡಂದಲೆಯಲ್ಲಿ ಆಯೋಜಿಸಲಾಯಿತು.
ಯೋಗ ಗುರು ಸುರೇಂದ್ರ ಯೋಗ ತರಬೇತಿ ನೀಡಿದರು. ವಕೀಲ ಶಾಂತಿ ಪ್ರಸಾದ ಹೆಗ್ಡೆ, ಆರೋಗ್ಯಾಧಿಕಾರಿ ಸಾಗರ ಪವಾರ್, ಶಾಲಾ ಮುಖ್ಯ ಶಿಕ್ಷಕ ದಿನಕರ ಕುಂಬಾಶಿ, ಕಾರ್ಯದರ್ಶಿ ಉಮೇಶ್ ನಾಯ್ಕ, ಪೂರ್ವಾಧ್ಯಕ್ಷ ಸುಧಾಕರ ಸರ್, ಜೆಸಿಐ ಸದಸ್ಯರಾದ ಸಂಪತ್ ರಾಜ್, ಶಾಲಾ ಶಿಕ್ಷಕರು, 160ಕ್ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.