
ಕೋಟದಲ್ಲಿ ಒಂದೇ ರಾತ್ರಿ ಸರಣಿ ಕಳವು
Sunday, June 29, 2025
ಕುಂದಾಪುರ: ಬ್ರಹ್ಮಾವರ ತಾಲೂಕಿನ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಮನೆಗಳಲ್ಲಿ ಶನಿವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದೆ.
ಕೋಟ ಸಮೀಪದ ಮಣೂರಿನಲ್ಲಿ ಎರಡು ಮನೆಗಳು, ಹಾಗೂ ಸಾಲಿಗ್ರಾಮ ಮತ್ತು ಸಾಸ್ತಾನದಲ್ಲಿ ಒಂದು ಮನೆಗೆ ಕನ್ನ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಯಾರೂ ಇಲ್ಲದ ಮನೆಗಳನ್ನು ಮಾತ್ರ ಕಳ್ಳರು ಟಾರ್ಗೆಟ್ ಮಾಡಿ ಬೀಗ ಮುರಿದು ಒಳನುಗ್ಗಿ ಹುಡುಕಾಡಿ ಕೈಗೆ ಸಿಕ್ಕಿದನ್ನು ದೋಚಿ ಪರಾರಿ ಆಗಿದ್ದಾರೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.