
ಮಾಜಿ ಸಭಾಪತಿ ಪ್ರತಾಪಾಚಂದ್ರ ಶೆಟ್ಟಿ ನಿವಾಸಕ್ಕೆ ಸಚಿವೆ ಹೆಬ್ಬಾಳ್ಕರ್ ಭೇಟಿ
Saturday, June 21, 2025
ಕುಂದಾಪುರ: ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿಯವರ ಹೈಕಾಡಿಯ ನಿವಾಸಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಪ್ರತಾಪಚಂದ್ರ ಶೆಟ್ಟಿಯವರಿಂದ ಮಾಹಿತಿ ಪಡೆದರು. ಅನುಭವಿ ರಾಜಕಾರಣಿ ಪ್ರತಾಪಚಂದ್ರ ಶೆಟ್ಟಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಚಿವೆಯೊಂದಿಗೆ ಚರ್ಚಿಸಿ, ಕೆಲವು ಪರಿಹಾರ ಕ್ರಮಗಳನ್ನೂ ಸೂಚಿಸಿದರು ಎನ್ನಲಾಗಿದೆ. ರಾಜಕೀಯ ಸಲಹೆ, ಮಾರ್ಗದರ್ಶನ ನೀಡಬೇಕೆಂದು ಸಚಿವರು ಕೋರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ ಕೊಡವೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ, ಮುನಿಯಾಲು ಉದಯ ಶೆಟ್ಟಿ, ಬೆಳ್ಟೆ ಸತೀಶ ಕಿಣಿ, ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.