
ಯುನಿವರ್ಸಲ್ ವಿದ್ಯಾರ್ಥಿ ಸಂತೋಷ ಎಚ್.ಎಂ. ಯುಪಿಎಸ್‌ಸಿ ಸಿಎಪಿಎಫ್ 2024 ಪರೀಕ್ಷೆಯಲ್ಲಿ ಭಾರತ ಮಟ್ಟದಲ್ಲಿ 89ನೇ ರ‍್ಯಾಂಕ್
ಮಂಗಳೂರು: ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯ ವಿದ್ಯಾರ್ಥಿ ಸಂತೋಷ ಎಚ್.ಎಂ. ಯುಪಿಎಸ್‌ಸಿಯಿಂದ ನಡೆದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಹಾಯಕ ಕಮಾಂಡಂಟ್) ಪರೀಕ್ಷೆ 2024ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ೮೯ನೇ ರ‍್ಯಾಂಕ್ ಪಡೆದು ಸಂಚಲನ ಮೂಡಿಸಿದ್ದಾರೆ.
ಜೂ.13 ರಂದು ಫಲಿತಾಂಶ ಪ್ರಕಟವಾಗಿದ್ದು, ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ.
ಸಂತೋಷ ಅವರು ಬಿಬಿಎಂಪಿ ವತಿಯಿಂದ ನಿಯೋಜಿಸಲ್ಪಟ್ಟ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಆತ್ಮವಿಶ್ವಾಸ, ಶ್ರಮ ಮತ್ತು ಸರಿಯಾದ ಮಾರ್ಗದರ್ಶನವಿದ್ದರೆ ಸಾಧನೆಯನ್ನು ಮಾಡಬಹುದು.
ಸಂತೋಷ ಅವರು ಐಎಎಸ್, ಐಪಿಎಸ್, ಕೆಎಎಸ್ ಮೂರು ವರ್ಷದ ಇಂಟಿಗ್ರೇಟೆಡ್ ಪದವಿಯ ವಿದ್ಯಾರ್ಥಿಯಾಗಿದ್ದು, ಇಂಟಿಗ್ರೇಟೇಡ್ ಪದವಿಯು ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ವಿಶೇಷ ಶಿಕ್ಷಣ ಯೋಜನೆಯಾಗಿದೆ. 2023ರ ಸಾಲಿನ ಬೆಂಗಳೂರು ವಿಶ್ವವಿದ್ಯಾಲಯದ ಪ್ರಥಮ ರ‍್ಯಾಂಕ್ ಸಹ ಪಡೆದಿರುತ್ತಾರೆ. ಈ ಸಾಧನೆಯೊಂದಿಗೆ ಯುನಿವರ್ಸಲ್ ಕೋಚಿಂಗ್ ಸೆಂಟರ್ ತನ್ನ 25ನೇ ವಾರ್ಷಿಕೋತ್ಸವದ ಹೊಸ್ತಿಲಲ್ಲಿದ್ದು, ಸಂಸ್ಥೆಯ 8036ಕ್ಕೂ ಹೆಚ್ಚು ಅಭ್ಯರ್ಥಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಎ, ಬಿ, ಸಿ ಸರ್ಕಾರಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಯುನಿವರ್ಸಲ್ ಸಂಸ್ಥೆಗಳ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ತಿಳಿಸಿದ್ದಾರೆ.
ಸಂತೋಷನ ಸಾಧನೆ ಯುವಕರಿಗೆ ಸ್ಫೂರ್ತಿ, ಸಹಾಯ ಮತ್ತು ಮಾರ್ಗದರ್ಶನ ಸಿಕ್ಕರೆ ಪ್ರತಿಯೊಬ್ಬನ ಕನಸುಗಳು ನನಸಾಗಬಹುದು. ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಯುನಿವರ್ಸಲ್‌ನ 25 ವರ್ಷಗಳ ಪ್ರಯಾಣ ತಂತ್ರಜ್ಞಾನದೊಂದಿಗೆ ಸಮಾಜಸೇವೆಯ ಹೊಸ ದಾರಿಗಳನ್ನು ತೆರೆದಿದೆ ಎಂದು ಉಪೇಂದ್ರ ಶೆಟ್ಟಿ ತಿಳಿಸಿದ್ದಾರೆ.