
ಜೂ. 8ರಂದು ಯುವ ನೃತ್ಯೋತ್ಸವ-2025
Wednesday, June 4, 2025
ಮಂಗಳೂರು: ಬಿಜೈಯಲ್ಲಿರುವ ನೃತ್ಯಾಂಗನ್ ಸಂಸ್ಥೆ ಜೂನ್ 8ರಂದು ‘ಯುವ ನೃತ್ಯೋತ್ಸವ-2025 ಡಾ. ಅರುಣ್ ಕುಮಾರ್ ಮೈಯಾ ಅವರ ಸ್ಮರಣಾರ್ಥ’, ಕಾರ್ಯಕ್ರಮ ಹಮ್ಮಿಕೊಂಡಿದೆ.
ಅಂದು ಸಂಜೆ 5.30 ಗಂಟೆಗೆ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಭರತಾಂಜಲಿ ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ಚಾಲನೆ ನೀಡುವರು. ಯುವ ನೃತ್ಯೋತ್ಸವ-2025ರ ಪ್ರಯುಕ್ತ ಉದಯೋನ್ಮುಖ ಕಲಾವಿದೇಯರಾದ ಶ್ರೇಷ್ಠಾ ಆರ್. ದೇವಾಡಿಗ, ಪೂಜಾ ಸುಗಮ್, ಶ್ರೇಯಾ ಜಿ. ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಪಡಿಸುವರು. ಪೃಥ್ವಿ ನಾಯಕ್ ಏಕವ್ಯಕ್ತಿ ಒಡಿಸ್ಸಿ ಪ್ರಸ್ತುತಪಡಿಸುವರು.
ಬಳಿಕ ಗುರು ವಿದುಷಿ ಪ್ರತಿಮಾ ಶ್ರೀಧರ್ ಅವರ ಶಿಷ್ಯೆಯಂದಿರು ಸಮೂಹ ನೃತ್ಯ ಪ್ರಸ್ತುತಪಡಿಸುವರು. ಆಸಕ್ತರಿಗೆ ಉಚಿತ ಪ್ರವೇಶ ಎಂದು ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.