
ಸಂತ ಫಿಲೋಮಿನಾ ಕಾಲೇಜಿನ ‘ಟೆಕ್ ಹಬ್’ ಉದ್ಘಾಟನೆ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾಯೋಜಕತ್ವದಲ್ಲಿ ಇಂದು ಟೆಕ್ ಹಬ್ ಅನ್ನು ಉದ್ಘಾಟಿಸಲಾಯಿತು.
ಯುನಿಯನ್ ಬ್ಯಾಂಕ್ ಸೋ಼ಷಿಯಲ್ ಫೌಂಡೇಶನ್ ಯೋಜನೆಯಲ್ಲಿ ಪ್ರಾಯೋಜಿಸಲ್ಪಟ್ಟ 5.85 ರೂಪಾಯಿ ಮೌಲ್ಯದ 10 ಉತ್ತಮ ಗುಣಮಟ್ಟದ ಕಂಪ್ಯೂಟರ್ಗಳನ್ನು ಒಳಗೊಂಡ ಸುಸಜ್ಜಿತ ಪ್ರಯೋಗಾಲಯವೇ ಕಾಲೇಜಿನ ಟೆಕ್ ಹಬ್ ಯುನಿಯನ್ ಬ್ಯಾಂಕ್‌ನ ಮಂಗಳೂರು ವಲಯದ ಡೆಪ್ಯುಟಿ ಜನರಲ್ ಮ್ಯಾನೇಜರ್ ಸುನಿಲ್ ವಿ ಪಾಟೀಲ್ ರಿಬ್ಬನ್ ಕತ್ತರಿಸಿ ದೀಪ ಬೆಳಗಿಸುವುದರ ಮೂಲಕ ಟೆಕ್ ಹಬ್‌ಅನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ‘ತಂತ್ರಜ್ಞಾನದ ಮೇಲೆ ನಾವು ಇಂದು ಮಾಡಿದ ಹೂಡಿಕೆಯು ಅತ್ಯಂತ ಸಮರ್ಪಕವಾದುದು. ಈ ಮೂಲಕ ನಾವು ಗ್ರಾಮೀಣ ವಿದ್ಯಾರ್ಥಿಗಳ ಡಿಜಿಟಲ್ ಸಬಲೀಕರಣಕ್ಕೆ ನಾಂದಿ ಹಾಡಿದ್ದೇವೆ. ಇದು ಕೇವಲ ಪ್ರಾರಂಭವಷ್ಟೇ, ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಉತ್ತಮ ಕಾರ್ಯಗಳಿಗೆ ಸಂತ ಫಿಲೋಮಿನಾ ಕಾಲೇಜಿನ ಜೊತೆಗೆ ಸಹಯೋಗ ಹೊಂದಲು ಉತ್ಸುಕರಾಗಿದ್ದೇವೆ. ಈ ಯೋಜನೆಯ ಮುಖಾಂತರ ವಿದ್ಯಾರ್ಥಿಗಳು ಆಧುನಿಕ ಕೌಶಲ್ಯಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಲಿ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊರವರು ‘ಈಂದಿನ ಕಾಲಘಟ್ಟದಲ್ಲಿ ಡಿಜಿಟಲ್ ಸಾಕ್ಷರತೆಯ ಅವಶ್ಯಕತೆಯು ಬಹಳಷ್ಟಿದೆ. ಗಾಮೀಣ ವಿದ್ಯಾರ್ಥಿಗಳು ಡಿಜಿಟಲ್ ಕೌಶಲ್ಯಗಳ ಕೊರತೆಯಿಂದಾಗಿ ಉದ್ಯಾಗಾವಕಾಶ ವಂಚಿತರಾಗುವುದನ್ನು ಮನಗಂಡು ಅವರಿಗೆ ತರಬೇತಿ ನೀಡುವ ಸಲುವಾಗಿ ಈ ಟೆಕ್ ಹಬ್ ಅನ್ನು ಸ್ಥಾಪಿಸುವ ಯೋಜನೆಮಾಡಲಾಯಿತು. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ನಮ್ಮೊಡನೆ ಯುನಿಯನ್ ಬ್ಯಾಂಕ್ ಕೈ ಜೋಡಿಸಿರುವುದು ಶ್ಲಾಘನೀಯ. ಇಲ್ಲಿ ಎಷ್ಟು ಕಂಪ್ಯೂಟರ್ಗಳನ್ನು ಸ್ಥಾಪಿಸಿದ್ದೇವೆ ಎಂಬುದು ಮಹತ್ವದ ವಿಷಯವಲ್ಲ ಆದರೆ ಈ ಮೂಲಕ ಎಷ್ಟು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ಧೇವೆ ಎಂಬುದು ಪ್ರಾಮುಖ್ಯವಾಗಿದೆ. ಯುನಿಯನ್ ಬ್ಯಾಂಕ್ ಸೋಷಿಯಲ್ ಫೌಡೇಶನ್ ಮುಖಾಂತರ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಇನ್ನಷ್ಟು ಐ?ಜನೆಗಳು ಮೂಡಿ ಬರಲಿ’ ಎಂದು ಹೇಳಿ ಈ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಮುತುವರ್ಜಿ ವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಯುನಿಯನ್ ಬ್ಯಾಂಕ್‌ನ ವಿಶ್ರಾಂತ ಡೆಪ್ಯುಟಿ ಜನರಲ್ ಮ್ಯಾನೇಜರ್ ರವೀಶ್ ನಾಯಕ್ ಅವರು ‘ಸಂತ ಫಿಲೋಮಿನಾ ಕಾಲೇಜು ಹಾಗೂ ಅಂದಿನ ಕಾರ್ಪೊರೇಷನ್ ಬ್ಯಾಂಕ್‌ಗಳ ಒಡನಾಟವು ಸುಮಾರು ಐದು ದಶಕಗಳಿಗೂ ಹೆಚ್ಚಿನದಾಗಿದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ ಸಮಗ್ರ ಶಿಕ್ಷಣವನ್ನು ನೀಡುತ್ತಿರುವ ಸಂತ ಫಿಲೋಮಿನಾ ಕಾಲೇಜು ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಯಾಗಿ ಸೇರಿ ಸ್ಥಾಪಿಸಿದ ಈ ಟೆಕ್ ಹಬ್ ಮುಖಾಂತರ ವಿದ್ಯಾರ್ಥಿಗಳು ಅತ್ಯಾಧುನಿಕ ಐಟಿ ಕೌಶಲ್ಯಗಳಲ್ಲಿ ಪರಿಣಿತರಾಗಲಿ’ ಎಂದು ಹೇಳಿ ಟೆಕ್ ಹಬ್ ನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.
ಯುನಿಯನ್ ಬ್ಯಾಂಕ್‌ನ ಸಂತ ಫಿಲೋಮಿನಾ ಕಾಲೇಜು ಶಾಖೆಯ ಪ್ರಬಂಧಕರಾದ ಅನುರಾಧ ಹೆಚ್.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತನ್ವಿ ರೈ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವರು ಹಾಗೂ ಕಂಪ್ಯೂಟ್ ಅಪ್ಲಿಕೇಶನ್ ವಿಭಾಗದ ಮುಖ್ಯಸ್ಥರೂ ಆದ ಡಾ. ವಿನಯಚಂದ್ರ ಸ್ವಾಗತಿಸಿ ಟೆಕ್ ಹಬ್ ಸ್ಥಾಪನೆಯ ಧ್ಯೇಯ, ಉದ್ದೇಶ ಹಾಗೂ ಟೆಕ್ ಹಬ್ ಮುಖಾಂತರ ಆಯೋಜಿಸಲ್ಪಡುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಂಪ್ಯೂಟ್ ಅಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಕ್ಷತಾ ಬಿ ವಂದಿಸಿದರು. ಡಾ. ಗೀತಾ ಪೂರ್ಣಿಮಾ ಕೆ ಕಾರ್ಯಕ್ರಮ ನಿರೂಪಿಸಿದರು.
ಯುನಿಯನ್ ಬ್ಯಾಂಕ್‌ನ ಸೀನಿಯರ್ ಮ್ಯಾನೇಜರ್‌ಗಳಾದ ಚೇತನ್ ಅರೋರಾ, ಗ್ರೇಸಿ ಲೋಬೋ, ಬೊಳುವಾರು ಶಾಖೆಯ ಪ್ರಬಂಧಕರಾದ ಕೆ.ಟಿ. ವೈಯರ ಕುಮಾರ್, ಹಾಗೂ ಸಂತ ಫಿಲೋಮಿನಾ ಕಾಲೇಜು ಶಾಖೆಯ ಆಫೀಸರ್ ಉಮಾದೇವಿ ಎಂ., ಕಾಲೇಜಿನ ಪ್ರಾಧ್ಯಾಪಕ ವೃಂದ ಮತ್ತು ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಯುನಿಯನ್ ಬ್ಯಾಂಕ್‌ನ ಪ್ರಾಯೋಜಕತ್ವದಲ್ಲಿ ಕಾಲೇಜಿನಲ್ಲಿ ಟೆಕ್ ಹಬ್ ಸ್ಥಾಪಿಸಿದುದಕ್ಕೆ ಸಂಚಾಲಕರಾದ ಅತಿ ವಂ. ಲಾರೆನ್ಸ್ ಮಸ್ಕರೇನಸ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.