
ಎಸ್ಪಿ ಇಲ್ಲದೆ ಹಿಂತಿರುಗಿದ ವಕೀಲರ ನಿಯೋಗ
Friday, June 27, 2025
ಮಂಗಳೂರು: ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರನ್ನೊಳಗೊಂಡ ನ್ಯಾಯವಾದಿಗಳ ನಿಯೋಗವು ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿದೆ. ಈ ಸಂದರ್ಭ ಎಸ್ಪಿಯವರು ಕಚೇರಿಯಲ್ಲಿ ಇಲ್ಲದ ಕಾರಣ ನಿಯೋಗ ಹಿಂತಿರುಗಿದೆ.
ಕಾರ್ಯಕ್ರಮವೊಂದರ ನಿಮಿತ್ತ ಎಸ್ಪಿ ಡಾ. ಅರುಣ್ ಕುಮಾರ್‌ರವರು ಬೆಂಗಳೂರಿಗೆ ತೆರಳಿದ್ದ ಕಾರಣ, ನ್ಯಾಯವಾದಿಗಳ ನಿಯೋಗ ಎಸ್ಪಿ ಕಚೇರಿಯಿಂದ ಹಿಂತಿರುಗಿದೆ.
ದ.ಕ. ಜಿಲ್ಲೆಯ ಗ್ರಾಮವೊಂದರ ಈ ಹಿಂದಿನ ಪ್ರಮುಖ ಪ್ರಕರಣಗಳ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಮನವಿ ಜತೆ ಚರ್ಚಿಸುವ ಸಲುವಾಗಿ ನ್ಯಾಯವಾದಿಗ ನಿಯೋಗ ಮಧ್ಯಾಹ್ನ 12ಕ್ಕೆ ಎಸ್ಪಿ ಕಚೇರಿಗೆ ಭೇಟಿ ನೀಡುತ್ತಿರುವುದಾಗಿ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶ್ಪಾಂಡೆಯವರು ಪ್ರಕಟನೆಯಲ್ಲಿ ತಿಳಿಸಿದ್ದರು.
ಎಸ್ಪಿ ಕಚೇರಿಯಲ್ಲಿ ಉಪಸ್ಥಿತರಿದ್ದ ಪತ್ರಕರ್ತರು ನಿಯೋಗದಲ್ಲಿದ್ದ ನ್ಯಾಯವಾದಿಗಳನ್ನು ಮಾತನಾಡಿಸಲು ಯತ್ನಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು.