ಶ್ರೀ ಕ್ಷೇತ್ರ ಕದ್ರಿಯಲ್ಲಿ ಜೂ.9 ರಂದು ಸಾಮೂಹಿಕ ಸೀಯಾಳಾಭಿಷೇಕ

ಶ್ರೀ ಕ್ಷೇತ್ರ ಕದ್ರಿಯಲ್ಲಿ ಜೂ.9 ರಂದು ಸಾಮೂಹಿಕ ಸೀಯಾಳಾಭಿಷೇಕ

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಹತ್ತು ಸಮಸ್ತರು, ಸಾರ್ವಜನಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜೂ.9 ರಂದು ಬೆಳಗ್ಗೆ 9.30 ಗಂಟೆಗೆ ಲೋಕಕಲ್ಯಾಣಾರ್ಥ, ಸಾಮೂಹಿಕ ಪ್ರಾರ್ಥನೆ, ಸೀಯಾಳಾಭಿಷೇಕ ಆಯೋಜಿಸಲಾಗಿದೆ. 

ತಂತ್ರಿಗಳು, ಅರ್ಚಕರು ಮತ್ತು ಸಿಬ್ಬಂದಿಗಳು, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಜೆ. ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಆಡಳಿತಾಧಿಕಾರಿಗಳು, ಹತ್ತು ಸಮಸ್ತರು ಮತ್ತು ಜನ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಭಿಷೇಕಕ್ಕೆ ಬೇಕಾಗುವ ಸೀಯಾಳವನ್ನು ಮುಂಚಿತವಾಗಿ ದೇವಳಕ್ಕೆ ತಂದೊಪ್ಪಿಸಬಹುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article