ಮಹಿಳಾ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಗೀತಾ ಸುರತ್ಕಲ್ ಆಯ್ಕೆ

ಮಹಿಳಾ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಗೀತಾ ಸುರತ್ಕಲ್ ಆಯ್ಕೆ


ಮಂಗಳೂರು: ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾ ಸಮ್ಮೇಳನವು ಜುಲೈ 27ರಂದು ಮಂಗಳೂರಿನಲ್ಲಿ ಜರುಗಲಿದ್ದು, ಇದರ ಯಶಸ್ವಿಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಖ್ಯಾತ ಚಿತ್ರನಟಿ, ರಂಗನಟಿ, ಸ್ತ್ರೀವಾದಿ ಚಿಂತಕಿ ಗೀತಾ ಸುರತ್ಕಲ್ ರವರನ್ನು ಆಯ್ಕೆ ಮಾಡಲಾಗಿದೆ.

ಗೀತಾ ಸುರತ್ಕಲ್ ಅವರು ಸ್ತ್ರೀವಾದಿ ಚಿಂತನೆಯ ಪ್ರಗತಿಪರ ಸಾಹಿತಿಗಳಾಗಿದ್ದು, ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ-2018 ಇದರ ಉದ್ಘಾಟಕರಾಗಿದ್ದರು. ನಾಟಕ ರಂಗ ಗೀತಾ ಸುರತ್ಕಲ್ ಅವರಾಸಕ್ತಿಯ ಕ್ಷೇತ್ರ. ಸಮಾಜ ಬದಲಾವಣೆಯಲ್ಲಿ ನಾಟಕಗಳ ಪಾತ್ರ ಅಪಾರವಾಗಿರುವುದರಿಂದ ರಂಗ ಕ್ಷೇತ್ರವನ್ನು ನೆಚ್ಚಿಕೊಂಡಿದ್ದರು. ನಾಟಕದಲ್ಲಿ ಇವರ ಪಾತ್ರಗಳು ರಾಜ್ಯಾಧ್ಯಂತ ಮೆಚ್ಚುಗೆ ಗಳಿಸಿದ್ದವು.

ಸಿನೇಮಾದಲ್ಲೂ ಗುರುತರ ಪಾತ್ರಗಳನ್ನು ನಿರ್ವಹಿಸಿರುವ ಗೀತಾ ಸುರತ್ಕಲ್ ಅವರು ಆ ಮೂಲಕ ಸಮಾಜಕ್ಕೆ ವಿಶಿಷ್ಠ ಸಂದೇಶ ನೀಡಿದ್ದಾರೆ. ಬೋಳುವಾರು ಮಹಮ್ಮ್ಮದ್ ಕುಂಞಿ ಅವರ ಪ್ರಸಿದ್ಧ ಕತೆಯನ್ನು ಅನನ್ಯ ಕಾಸರವಳ್ಳಿ ಅವರು  ‘ಕಪ್ಪು ಕಲ್ಲಿನ ಶೈತಾನ’ ಸಿನಿಮಾ ನಿರ್ದೇಶಿಸಿದ್ದು ಕಲಾವಿದೆ ಗೀತಾ ಸುರತ್ಕಲ್ ಪ್ರಧಾನ ಭೂಮಿಕೆ ನಿರ್ವಹಿಸಿದ್ದಾರೆ. ಇದಲ್ಲದೇ ಇತ್ತಿಚ್ಚಿನ ಅಮ್ಮಚ್ಚಿ ಎಂಬ ನೆನಪು, ತುರ್ತು ನಿರ್ಗಮನ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ.

ಕರಾವಳಿಯ ವರ್ತಮಾನದ ದುರಿತಗಳಿಗೆ ಸದಾ ಸ್ಪಂದಿಸುವ ಗೀತಾ ಸುರತ್ಕಲ್ ಅವರು, ಮಂಗಳೂರು ಮತೀಯ ಅಸಹಿಷ್ಣುತೆಯ ತಾಣವಾಗುವುದನ್ನು ಕಂಡು ಸುಮ್ಮನಿರದೆ ಚಳವಳಿಗಳಿಗೆ ಹೆಗಲು ಕೊಡುತ್ತಿದ್ದಾರೆ. ಗೀತಾ ಸುರತ್ಕಲ್ ಅವರು ಈ ಬಾರಿಯ ಜನವಾದಿ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಗತಿಪರ ಸ್ತ್ರೀವಾದಿ ಚಳವಳಿಯ ನೇತೃತ್ವ ವಹಿಸಲಿದ್ದಾರೆ.

ಅದರಂತೆ ಸ್ವಾಗತ ಸಮಿತಿಯ ಅದ್ಯಕ್ಷರಾಗಿ ಪ್ಲೇವಿಕ್ರಾಸ್ತಾ ಅತ್ತಾವರ,ಪ್ರಧಾನ ಕಾರ್ಯದರ್ಶಿಯಾಗಿ ಜಯಂತಿ ಬಿ ಶೆಟ್ಟಿ, ಖಜಾಂಚಿಯಾಗಿ ಅಸುಂತ ಡಿಸೋಜರವರು ಆಯ್ಕೆಗೊಂಡರು.ಇತರ ಪದಾಧಿಕಾರಿಗಳಾಗಿ ಚಂದ್ರಕಲಾ ನಂದಾವರ, ಬಿ.ಎಂ. ರೋಹಿಣಿ, ಮಂಜುಳಾ ನಾಯಕ್, ಸ್ವರ್ಣ ಭಟ್, ಸುಮತಿ ಹೆಗ್ಡೆ,ಶರೀಲ್ ಅರುಣ್ ಬಂಗೇರ, ಗ್ರೆಟ್ಟಾ ಟೀಚರ್, ಧನವಂತಿ ಪೂಜಾರಿ, ವಿದ್ಯಾ ಶೆಣೈ, ಬದ್ರುನ್ನೀಸಾ, ಉಮೈನಾ, ಶಾಲಿನಿ, ಅರ್ಚನಾ ರಾಮಚಂದ್ರ, ದೇವಿಕಾ ರೈ, ಡಾ.ಹರಿಣಾಕ್ಷಿ ಕುಂಪಲ, ಡಾ. ಸವಿತಾ ಸುವರ್ಣ, ಕಾರ್ಮಿಲಿಟಾ ಡಿಸೋಜ, ಚಂದ್ರಕಲಾ, ಚಿತ್ರಲೇಖಾ,ಆಶಾ ಸಂಜೀವನಾ, ದಿಷಾ ರೀಟಾ ಪುರ್ತಾಡೋ, ಗುಣವತಿ ಕಿನ್ಯಾ ಸೇರಿದಂತೆ ಸುಮಾರು 100 ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article