ಕೋಮು ಗಲಭೆ ನಿಯಂತ್ರಣ ವಿಶೇಷ ಕಾರ್ಯಪಡೆ ಘಟಕಕ್ಕೆ ಚಾಲನೆ

ಕೋಮು ಗಲಭೆ ನಿಯಂತ್ರಣ ವಿಶೇಷ ಕಾರ್ಯಪಡೆ ಘಟಕಕ್ಕೆ ಚಾಲನೆ


ಮಂಗಳೂರು: ವಿಶೇಷ ಕಾರ್ಯಪಡೆ ಬಹಳ ದಿನಗಳ ಹಿಂದೆ ರಚನೆ ಮಾಡಬೇಕು ಎಂದು ಅಂದುಕೊಂಡಿದ್ದೆವು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ರಾಜ್ಯ ಸರಕಾರ ರಚಿಸಿರುವ ವಿಶೇಷ ಕಾರ್ಯಪಡೆ ಘಟಕವನ್ನು ಉದ್ಘಾಟಿಸಿ ಮಾತನಾಡಿ ಶಾಂತಿ ಸ್ಥಾಪಿಸಲು ಸೌಹಾರ್ದಯುತವಾಗಿ ಪ್ರಯತ್ನ ಪಟ್ಟೆವು ಆದರೆ ಆ ಪ್ರಯತ್ನ ಫಲ ಕಾಣಲಿಲ್ಲ ಈ ಹಿನ್ನೆಲೆಯಲ್ಲಿ ಬೈ ಫೋರ್ಸ್ ಆಗಿ ಶಾಂತಿ ಸ್ಥಾಪನೆಗೆ ಈ ಕಾರ್ಯಪಡೆ ರಚಿಸಿದ್ದೇವೆ
ನನಗೆ ವಿಶ್ವಾಸ ಇದೆ ಇದರ ಹೆಚ್ಚಿನ ಉಪಯೋಗ ಇಲ್ಲಿ ಬರದು, ಜನ ಅರ್ಥ ಮಾಡಿಕೊಂಡರೆ ಇದರ ಅಗತ್ಯತೆ ಕಡಿಮೆಯಾಗಲಿದೆ, ಶಾಂತಿ ಸ್ಥಾಪನೆಯೇ ಈ ವಿಶೇಷ ಕಾರ್ಯ ಪಡೆಯ ಮೂಲ ಉದ್ದೇಶ, ANF ಪಡೆಯ ವಿಸರ್ಜನೆ ಮಾಡುವುದಿಲ್ಲ, ANF ಅಗತ್ಯತೆ ಸದ್ಯಕ್ಕೆ ಇಲ್ಲದಿದ್ದರೂ ಕೂಡ ಯಾವುದಾದರೂ ಸಂದರ್ಭದಲ್ಲಿ ಬರಬಹುದು, ದೇಶದ ನಾನಾ ಭಾಗಗಳಲ್ಲಿ ನಕ್ಸಲ್ ಚಟುವಟಿಕೆ ಇಂದಿಗೂ ಇದೆ, ಆ ಭಾಗದಿಂದ ನಮ್ಮ ರಾಜ್ಯಕ್ಕೆ ನಕ್ಸಲರು ವಲಸೆ ಬರುವ ಆತಂಕ ಇದೆ, ಈ ಹಿಂದೆ ಕೂಡ ಇಂತಹ ಸಂದರ್ಭಗಳು ಬಂದಿವೆ, ಒಂದು ವೇಳೆ ಬೇರೆ ಭಾಗಗಳಿಂದ ನಕ್ಸಲರು ಬಂದರೆ ನಾವು ತಯಾರಾಗಿರಬೇಕು, ಅಶ್ರಫ್ ಹಾಗೂ ರೆಹಮಾನ್ ಕೊಲೆ ಪ್ರಕರಣದ ತನಿಖೆ ನಡಿತಾ ಇದೆ, ತನಿಖೆ ಒಂದು ದಿನ ಒಂದು ವಾರ ಒಂದು ತಿಂಗಳಲ್ಲಿ ಮುಗಿದು ಹೋಗುವುದಿಲ್ಲ, ಪ್ರಕರಣದ ಬುಡಕ್ಕೆ ಹೋಗಿ ಎಲ್ಲಿಂದ ಆಯಿತು? ಯಾರು ಅದರ ಹಿಂದೆ ಇದ್ದಾರೆ? ಈ ಪ್ರಕರಣಗಳ ವಿಸ್ತ್ರತ ತನಿಖೆ ಆಗಬೇಕು ನಡೆಸಲಾಗುತ್ತಿದೆ, ಹತ್ಯೆಗಳು ವೈಯಕ್ತಿಕ ಕಾರಣಗಳಿಗಾಗಿದೆಯಾ? ಅಥವಾ ಕೋಮು ದ್ವೇಷ ದಿಂದಾಗಿದೆಯಾ? ಗೊತ್ತಿಲ್ಲ, ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಆ ಬಳಿಕ ಸ್ಪಷ್ಟವಾಗಲಿದೆ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ NIA ಗೆ ವಹಿಸಿರುವ ಕುರಿತು, ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಪ್ರತಿಕ್ರಿಯೆ ಪ್ರಕರಣಗಳ ತನಿಖೆ ಕೈಗೆತ್ತಿಕೊಳ್ಳುವ ಅಧಿಕಾರ ಅವರಿಗಿದೆ, ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಆದ್ದರಿಂದ ಅವರಿಗೆ ತನಿಖೆಗೆ ಪ್ರಕರಣ ಕೊಡಲೇಬೇಕಾದ ಅನಿವಾರ್ಯತೆ ಇದೆ, ಅಶ್ರಫ್ ಹಾಗೂ ರೆಹಮಾನ್ ಹತ್ಯೆ ಪ್ರಕರಣ ತನಿಖೆ ಯನ್ನು NIA ಯವರು ಕೇಳಿಲ್ಲ ಈ ಪ್ರಕರಣದ ತನಿಖೆ ನಡೆಸಲು ನಮ್ಮ ಪೊಲೀಸರು ಸಮರ್ಥರಿದ್ದಾರೆ NIAಗೆ ನೀಡುವ ಅವಶ್ಯಕತೆ ಇಲ್ಲ, ಸುಹಾಸ್ ಶೆಟ್ಟಿ ಪ್ರಕರಣವನ್ನು NIA ಯವರು ಸ್ಪೆಸಿಫಿಕ್ ಆಗಿ ಯಾಕೆ ಕೇಳಿದ್ದಾರೆ ಗೊತ್ತಿಲ್ಲ, ಅಶ್ರಫ್ ಹಾಗು ರೆಹಮಾನ್ ಹತ್ಯೆ ಪ್ರಕರದ ತನಿಖೆ ನಮ್ಮ ಪೊಲೀಸರು ಮಾಡುತ್ತಿದ್ದಾರೆ, ಅದನ್ನು ತೀವ್ರ ಗೊಳಿಸುವ ಅವಶ್ಯಕತೆ ಇದ್ದರೆ ಎಸ್ ಐ ಟಿ ರಚನೆ ಬಗ್ಗೆ ಮುಂದೆ ನೋಡೋಣ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article