ಕೋಮು ಸಂಘರ್ಷ ತಡೆಯುವ ವಿಶೇಷ ಕಾರ್ಯಪಡೆ ರಚನೆ: ದ.ಕ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗ ಅಭಿನಂದನೆ

ಕೋಮು ಸಂಘರ್ಷ ತಡೆಯುವ ವಿಶೇಷ ಕಾರ್ಯಪಡೆ ರಚನೆ: ದ.ಕ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗ ಅಭಿನಂದನೆ

ಮಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕೋಮುಗಲಭೆ ಪ್ರಚೋದಿಸುವ ಸರಣಿ ಹತ್ಯೆಗಳನ್ನು ಮಟ್ಟ ಹಾಕಲು ಸ್ಪೆಷಲ್ ಆಕ್ಷನ್ ಫೋರ್ಸ್ ತಂಡವನ್ನು ರಚಿಸಿದ  ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ನಿಯೋಗ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿ ಮಾಡಿ ಅಭಿನಂದಿಸಿದೆ.

ಕಳೆದ ಹಲವು ತಿಂಗಳಿಗಳಿಂದ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಕೋಮು ವೈಷ್ಯಮ್ಯದಿಂದ ಶಾಂತಿ ಸುವ್ಯವಸ್ಥೆ ಹದಗೆಟ್ಟಿದ್ದು, ಹಲವು ಸಂಘಟನೆಗಳ ಮುಖಂಡರುಗಳಿಂದ ಕೋಮು ಪ್ರಚೋದನಕಾರಿ ಭಾಷಣಗಳಿಂದ ಮಾರಣಾಂತಿಕ ಹಲ್ಲೆ ಹಾಗೂ ಕೊಲೆಗಳು ನಡೆದಿದೆ. ಇದರಿಂದ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವಾಗಿದ್ದು ಅಶಾಂತಿ ವಾತಾವರಣ ಸೃಷ್ಟಿಯಾಗಿರುತ್ತದೆ. ಅಲ್ಲದೆ, ಜನ ಜೀವನ ಅಸ್ತವ್ಯಸ್ಥವಾಗಿರುತ್ತದೆ. ದಿನಗೂಲಿ ಕೆಲಸ  ಮಾಡುವ ಸಾಮಾನ್ಯರಿಗೆ ದಿನನಿತ್ಯ ಭಯ ಭೀತಿಯಿಂದ ಬದುಕುವ ವಾತಾವರಣ ಸೃಷ್ಟಿಯಾಗಿದೆ. ವ್ಯಾಪಾರ ಉದ್ಯಮ ಇತರ ಎಲ್ಲಾ ಆರ್ಥಿಕ ಚಟುವಟಿಕೆಗಳು ಕುಂಠಿತವಾಗಿದೆ.  ಈ ಬಗ್ಗೆ ಸೂಕ್ಷ್ಮವಾಗಿ ಪರಿಗಣಿಸಿರುವ ಸರ್ಕಾರದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ದ.ಕ. ಜಿಲ್ಲೆಯಲ್ಲಿ ಕೋಮು ಗಲಭೆಗಳನ್ನು ಮಟ್ಟ ಹಾಕಲು ಸ್ಪೆಷಲ್ ಆಕ್ಷನ್ ಫೋರ್ಸ್ ತಂಡವನ್ನು ಜಾರಿಗೊಳಿಸಿರುವುದಕ್ಕೆ ಶ್ಲಾಘಿಸಿತು.

 ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೇಮ್ ಬಳ್ಳಾಲ್ ಬಾಗ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಗಣೇಶ್ ಮೂಡಬಿದ್ರೆ, ಕಾರ್ಯದರ್ಶಿ ರವಿ ಸುಂಕದಕಟ್ಟೆ, ಕಾಂಗ್ರೆಸ್ ಮುಖಂಡರುಗಳಾದ ಅನಿಲ್ ಕುಮಾರ್ ಕಂಕನಾಡಿ, ಭರತ್ ಬಳ್ಳಾಲ್ ಬಾಗ್ ನಿಯೋಗದಲ್ಲಿ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article