
ಬೆಂಕಿ ಅವಘಡಗಳಿಂದ ರಕ್ಷಣಿ ಬಗ್ಗೆ ಮಾಹಿತಿ
Friday, June 13, 2025
ಮೂಡುಬಿದಿರೆ: ಇಲ್ಲಿನ ರೋಟರಿ ಪಿ.ಯು.ಕಾಲೇಜಿನಲ್ಲಿ ಫ಼ೈರ್ ಸೇಪ್ಟಿ ಮತ್ತು ಬೆಂಕಿ ಆಕಸ್ಮಿಕ ಗಳಿಂದ ನಮ್ಮನ್ನು ರಕ್ಷಣೆ ಮಾಡುವುದು ಮತ್ತು ವಿಕೋಪಗಳ ನಿರ್ವಹಣೆ ಬಗ್ಗೆ ಮಂಗಳೂರಿನ ಸತ್ಯರಾಜ್ ಅವರು ಶುಕ್ರವಾರ ಮಾಹಿತಿ ನೀಡಿದರು.
ಕಾಲೇಜಿನ ಮಕ್ಕಳಿಗೆ ಪ್ರಾತ್ಯಕ್ಷಿಕೆಯನ್ನು ಮಾಡುವುದರ ಮುಖಾಂತರ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನ ಅಧ್ಯಾಪಕ ವೃಂದದವರಿಗೆ ಹೇಳಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಮತ್ತು ಕಾಲೇಜಿನ ಉಪನ್ಯಾಸಕ ವೃಂದಾ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕಿ ಪೂಜಾ ರಾವ್ ಸ್ವಾಗತಿಸಿ ಕಾಯ೯ಕ್ರಮ ನಿರೂಪಿಸಿದರು.