
ಸಣ್ಣ ನೀರಾವರಿ ಇಲಾಖೆ ಕಚೇರಿ ಸ್ಥಳಾಂತರ
Monday, June 16, 2025
ಮಂಗಳೂರು: ಮಂಗಳೂರು ನಗರದ ಪಿ.ಡ.ಬ್ಲ್ಯೂ.ಡಿ ಕಟ್ಟಡದಲ್ಲಿ ಕಾರ್ಯನಿರ್ವಯಿಸುತ್ತಿರುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಕಚೇರಿಯನ್ನು ನಗರದ ಬೋಂದೆಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ವಂತ ಕಚೇರಿ ಕಟ್ಟಡಕ್ಕೆ ಜೂ.16 ರಂದು ಸ್ಥಳಾಂತರಗೊಳಿಸಲಾಗಿದೆ. ಆದ್ದರಿಂದ ಈ ಕಚೇರಿಗೆ ಸಂಬಂಧಿಸಿದಂತೆ ಯಾವುದೇ ಸರ್ಕಾರಿ/ಅರೆ ಸರ್ಕಾರಿ ಪತ್ರ ವ್ಯವಹಾರವನ್ನು ನೂತನ ಕಚೇರಿ ವಿಳಾಸ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಬೋಂದೆಲ್, ಮಂಗಳೂರು-575008, ದಕ್ಷಿಣ ಕನ್ನಡ ಇಲ್ಲಿಗೆ ಕಳುಹಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.