
ತುಳು ಸಂಘ ಸಂಸ್ಥೆಗಳ ಡೈರೆಕ್ಟರಿಗೆ ಮಾಹಿತಿ ಆಹ್ವಾನ
Tuesday, June 3, 2025
ಮಂಗಳೂರು: ತುಳು ಭಾಷೆ, ಕಲೆ, ಸಾಹಿತ್ಯ ಸಂಸ್ಕ್ರತಿಯ ಸಲುವಾಗಿ ಕಾರ್ಯ ನಿರ್ವಹಿಸುತ್ತಿರುವ ತುಳು ಸಂಘ, ಸಂಸ್ಥೆಗಳ ಮಾಹಿತಿ ಪುಸ್ತಕವನ್ನು ಅಕಾಡೆಮಿ ವತಿಯಿಂದ ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ತಿಳಿಸಿದ್ದಾರೆ.
ರಾಜ್ಯ, ಹೊರರಾಜ್ಯ, ವಿದೇಶಗಳಲ್ಲಿ ಸಕ್ರಿಯವಾಗಿರುವ ತುಳು ಸಂಘ, ಸಂಸ್ಥೆಗಳು ತಮ್ಮ ಸಂಘ ಆರಂಭವಾದ ವರ್ಷ, ಕೆಲಸ ಕಾರ್ಯದ, ವ್ಯಾಪ್ತಿಯ ವಿವರ ಸೇರಿದಂತೆ ಅಗತ್ಯ ಮಾಹಿತಿಯನ್ನು ಎರಡು ಪುಟಗಳಿಗೆ ಮೀರದಂತೆ ಬರೆದು ಜೂನ್.15ರೊಳಗೆ ಅಕಾಡೆಮಿಗೆ ಕಳುಹಿಸುವಂತೆ ಕೋರಲಾಗಿದೆ.
ವಿವರಗಳನ್ನು ಕಳುಹಿಸಬೇಕಾದ ವಿಳಾಸ: ರಿಜಿಸ್ಟ್ರಾರ್/ ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಭವನ, ಅಶೋಕ ನಗರ ಪೋಸ್ಟ್, ಉರ್ವಸ್ಟೋರ್, ಮಂಗಳೂರು-06. ವಾಟ್ಸ್‌ಆಪ್ ಸಂಖ್ಯೆ:7411572115, ಇಮೇಲ್ ವಿಳಾಸ: tulusahityaacademy@gmail.com