
ವಿಶ್ವ ಆಹಾರ ಸುರಕ್ಷತಾ ಕಾರ್ಯಕ್ರಮ
ಮಂಗಳೂರು: ವಳಚ್ಚಿಲ್ ಎಕ್ಸ್‌ಪರ್ಟ್ ಪಿಯು ಕಾಲೇಜು ಮತ್ತು ಸ್ಪೈಸಸ್ ಎನ್ ಶೆಫ್ಸ್ ಇದರ ಸಹಯೋಗದೊಂದಿಗೆ, ವಿಶ್ವ ಆಹಾರ ಸುರಕ್ಷತಾ ದಿನದ ಅಂಗವಾಗಿ 10 ದಿನಗಳ ಆಹಾರ ಸುರಕ್ಷತಾ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್, ಬೆಳೆಗಾರರು, ಸಂಸ್ಕರಣಾಕಾರರು ಸೇರಿದಂತೆ ಎಲ್ಲಾ ಬಳಕೆದಾರರು ಆಹಾರ ಸುರಕ್ಷತೆಯ ಮಹತ್ವವನ್ನು ತಿಳಿದಿರಬೇಕು ಎಂದು ಒತ್ತಿ ಹೇಳಿದರು.
ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಎಕ್ಸ್ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿಗಳು ಸುರಕ್ಷಿತ ಆಹಾರ ಆಯ್ಕೆಗಳು ಮತ್ತು ಪೌಷ್ಠಿಕಾಂಶದ ಅವಶ್ಯಕತೆಗಳ ಕುರಿತು ಮಾತನಾಡಿದರು.
ಸ್ಪೈಸಸ್ ಎನ್ ಶೆಫ್‌ನ ಆಡಳಿತ ನಿರ್ದೇಶಕ ದಿನೇಶ್ ಪಲ್ಲಿಯಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕ್ಯಾಂಪಸ್ ವೈದ್ಯಕೀಯ ಅಧಿಕಾರಿ ಡಾ. ಅಹದ್ ಮತ್ತು ಘಟಕ ಮುಖ್ಯಸ್ಥ ರಾಜೇಶ್ ಇ.ಟಿ. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಕ್ಸ್‌ಪರ್ಟ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಎನ್ ಕೆ ವಿಜಯನ್ ಕರಿಪ್ಪಲ್ ಅವರು ಔಪಚಾರಿಕವಾಗಿ ಉದ್ಘಾಟಿಸಿದರು.
ಸಮಗ್ರ ಜಾಗೃತಿ ಕಾರ್ಯಕ್ರಮದಲ್ಲಿ ದಕ್ಷಿಣ ರೈಲ್ವೆ ವಿಭಾಗದ ಆಹಾರ ಸುರಕ್ಷತಾ ಅಧಿಕಾರಿ ಸಂತೋಷ್ ಕುಮಾರ್ ಮತ್ತು ಮಂಗಳೂರು ರೈಲ್ವೆ ನಿಲ್ದಾಣದ ಆರೋಗ್ಯ ನಿರೀಕ್ಷಕ ಫ್ಯಾಬಿಯೊ ಅವರು ಮಾತನಾಡಿದರು.
ವೈದ್ಯಕೀಯ ಅಧಿಕಾರಿ ಡಾ. ಆಶಾ ಅವರು ಆರೋಗ್ಯ ಜಾಗೃತಿ ಕುರಿತು ಮಾತನಾಡಿದರು.
ಅಕ್ಷಯಪಾತ್ರೆ ಸೆಂಟ್ರಲ್ ಕಿಚನ್‌ಗೆ ಕ್ಷೇತ್ರ ಭೇಟಿಯನ್ನು ಆಯೋಜಿಸಲಾಗಿತ್ತು.
ಫರಂಗಿಪೇಟೆಯ ಶ್ರೀರಾಮ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮ ನಡೆಯಿತು. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಗಳು, ಚಿತ್ರಕಲಾ ಸ್ಪರ್ಧೆಗಳು ಮತ್ತು ವೀಡಿಯೊ ತಯಾರಿಕಾ ಸ್ಪರ್ಧೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು. ವ್ಯವಸ್ಥಾಪಕಿ ಸೌಪರ್ಣಿಕಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸ್ಪೈಸಸ್ ಎನ್ ಚೆಫ್‌ನ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಸುಮಾರು ೧೮೫ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.