ಪೊಲೀಸ್ ಲಾಠಿ ಕವಾಯತು

ಪೊಲೀಸ್ ಲಾಠಿ ಕವಾಯತು


ಮಂಗಳೂರು: ನಗರದ ಕ್ಲಾಕ್ ಟವರ್ ಬಳಿ ಮಂಗಳೂರು ನಗರ ಪೊಲೀಸರಿಂದ ಸೋಮವಾರ ಲಾಠಿ ಕವಾಯತು ನಡೆಯಿತು. ಕೆಎಸ್‌ಆರ್‌ಪಿ ತುಕಡಿಗಳು ಕವಾಯತಿನಲ್ಲಿ ಭಾಗವಹಿಸಿದ್ದವು.

ಮಂಗಳೂರು ನಗರದಲ್ಲಿ ಇತ್ತೀಚೆಗೆ ಉಂಟಾಗಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕವಾಯತು ಪ್ರದರ್ಶನ ನೀಡಲಾಯಿತು. 

ಆ ಮೂಲಕ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳುಮಾಡುವ ಯಾವುದೇ ಪ್ರಯತ್ನವನ್ನು ತಡೆಯಲು ಪೊಲೀಸ್ ಪಡೆಗಳು ಸದಾ ಸಿದ್ಧ ಎಂಬ ಸಂದೇಶ ಸಾರಲು ಈ ಕವಾಯತು ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article