‘ಸಾರ್ವಜನಿಕವಾಗಿ ಪಿಸ್ತೂಲ್ ಹಿಡಿದವರನ್ನು ಮೊದಲು ಗಡಿಪಾರು ಮಾಡಿ’

‘ಸಾರ್ವಜನಿಕವಾಗಿ ಪಿಸ್ತೂಲ್ ಹಿಡಿದವರನ್ನು ಮೊದಲು ಗಡಿಪಾರು ಮಾಡಿ’


ಮಂಗಳೂರು: ತನಗೆ ಗಡಿಪಾರು ನೋಟಿಸ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪುತ್ತೂರಿನ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ತನ್ನ ಪಕ್ಷದ ಶಾಸಕರ ವಿರುದ್ಧವೇ ತಿರುಗಿ ಬಿದ್ದಿದ್ದು, ಸಾರ್ವಜನಿಕವಾಗಿ ಪಿಸ್ತೂಲ್ ಹಿಡಿದ ಶಾಸಕ ಅಶೋಕ್ ರೈಯವರನ್ನು ಮೊದಲು ಗಡಿಪಾರು ಮಾಡಲಿ ಎಂದು ಕಿಡಿಕಾರಿದ್ದಾನೆ. 

ಮಾಧ್ಯಮಗಳ ಜೊತೆ ಮಾತನಾಡಿದ ಹಕೀಂ ಕೂರ್ನಡ್ಕ , ಪುತ್ತೂರು ಪೊಲೀಸರು ಸಹಾಯಕ ಆಯುಕ್ತರಿಗೆ ನನ್ನ ಮೇಲೆ ಇರುವ ಸುಳ್ಳು ದೂರುಗಳ ಮಾಹಿತಿ ನೀಡಿದ್ದಾರೆ. ಅಶೋಕ್ ರೈ ವಿರುದ್ಧ ಮಾತನಾಡಿದರೆ ನಿಮ್ಮನ್ನ ಗಡಿಪಾರು ಮಾಡುತ್ತೇವೆಂದು ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಈ ಹಿಂದೆ ಹೇಳಿದ್ದರು.  ಇದೀಗ ಯಾವುದೇ ಗುಂಪು ಗಲಭೆ, ಕೋಮುಗಲಭೆ, ಹಲ್ಲೆ, ಹತ್ಯೆ, ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣಗಳಲ್ಲಿ ಇಲ್ಲದ ನನ್ನನ್ನು ಯಾಕೆ ಗಡಿಪಾರು ಮಾಡಬಾರದೆಂಬ ನೋಟೀಸ್ ನೀಡಿದ್ದಾರೆ. ಇದರ ಹಿಂದೆ ಶಾಸಕ ಅಶೋಕ್‌ರೈ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾನೆ.

ಮುಸಲ್ಮಾನರ ಮತ ಪಡೆದು ಗೆದ್ದಿರುವ ಅಶೋಕ್ ರೈ ಮುಸಲ್ಮಾನರಿಗೆಯೇ ಅನ್ಯಾಯ ಮಾಡುತ್ತಿದ್ದಾರೆ, ಇತ್ತೀಚೆಗೆ ಹತ್ಯೆಯಾದ ರಹೀಂ ಮನೆಗೆ ಸಾಂತ್ವನ ಹೇಳಲು ಅಶೋಕ್ ರೈ ಯಾಕೆ ಹೋಗಿಲ್ಲ? ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿಗೆ ಬಂದಿರುವಾಗ ಅಶೋಕ್ ರೈ ಗೈರಾಗಿದ್ದರು, ಯಾಕೆಂದರೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ರಹೀಂ ಮನೆಗೆ ಸಾಂತ್ವನ ಹೇಳಲು ಹೋಗಬೇಕಾಗಬಹುದು ಎಂದು, ಸಾಂತ್ವನ ಹೇಳಲು ಹೋದರೆ ನನಗೆ ಹಿಂದೂಗಳ ಮತ ಸಿಗುವುದಿಲ್ಲ ಎಂಬುದು ಅವರ ಮನಸ್ಸಲ್ಲಿದೆ, ಅಶೋಕ್ ರೈಗಳೇ ನೀವು ನನ್ನ ಬೆವರಿನಿಂದ ಶಾಸಕರಾಗಿದ್ದೀರಿ, ಮುಂದಿನ ಬಾರಿ ನಿಮ್ಮನ್ನ ನಾನು ಮಾಜಿ ಶಾಸಕನಾಗಿ ಮಾಡುತ್ತೇನೆ, ನೀವು ಒಂದು ಗ್ರಾಮ ಪಂಚಾಯತ್ ಚುನವಣೆಯಲ್ಲೂ ನಿಂತತೂ ಸೋಲಿಸುತ್ತೇನೆ, ನಿಜವಾಗಿ ಹಕೀಂ ಕೂರ್ನಡ್ಕನನ್ನ ಗಡಿಪಾರು ಮಾಡುವ ಮೊದಲು ಅಶೋಕ್ ರೈ ಅವರನ್ನ ಗಡಿಪಾರು ಮಾಡಬೇಕು ಎಂದಿದ್ದಾನೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article