
ಮುಂಡಾಜೆ ಬಳಿ ಪ್ರಯಾಣಿಕರ ತಂಗುದಾಣಕ್ಕೆ ಢಿಕ್ಕಿ ಹೊಡೆದ ಕಾರು
Tuesday, June 3, 2025
ಉಜಿರೆ: ಚಾರ್ಮಾಡಿ ಕಡೆಯಿಂದ ಉಜಿರೆ ಕಡೆ ಹೆದ್ದಾರಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರ ಕಾರೊಂದು ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಟು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಯಾಣಿಕರ ತಂಗುದಾಣಕ್ಕೆ ಢಿಕ್ಕಿ ಹೊಡೆದ ಘಟನೆ ಮಂಗಳವಾರ ನಡೆದಿದೆ.
ಚಿತ್ರದುರ್ಗ ಮೂಲದ ನಾಲ್ವರು ಕಾರಲ್ಲಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಬಸ್ ತಂಗುದಾಣದ ಆಸು ಪಾಸು ವಾಹನ ನಿರೀಕ್ಷಿಸುವ ಪ್ರಯಾಣಿಕರು ಇರುತ್ತಾರೆ. ಆದರೆ ಘಟನೆ ನಡೆದಾಗ ಯಾರೂ ಇಲ್ಲದ ಕಾರಣ ಸಂಭವನೀಯ ಭಾರೀ ಪಾಯ ತಪ್ಪಿದೆ. ಬಸ್ ತಂಗುದಾಣದ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲದ ಸ್ಥಿತಿ ಇದ್ದು, ಜನ ಅದರ ಮುಂಭಾಗದಲ್ಲೇ ನಿಂತು ವಾಹನಗಳನ್ನು ನಿರೀಕ್ಷಿಸುತ್ತಾರೆ.