
ವಿದೇಶದಲ್ಲಿ ಉದ್ಯೋಗ ವಂಚನೆ: ಕ್ರಮಕ್ಕೆ ಗೃಹ ಸಚಿವರಿಗೆ ಮನವಿ
ಮಂಗಳೂರು: ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ಅರ್ಜಿ ಪಡೆದು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ಉದ್ಯೋಗ ನೀಡದೆ ವಂಚಿಸುತ್ತಿರುವ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ವಹಿಸುವಂತೆ ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದಿಂದ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷ ಲಾರೆನ್ಸ್ ಡಿಸೋಜಾ ನೇತೃತ್ವದ ನಿಯೋಗ ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಶುಕ್ರವಾರ ಭೇಟಿಯಾಗಿ ಮನವಿ ಸಲ್ಲಿಸಿತು.
ವಿದೇಶದಲ್ಲಿ ಉದ್ಯೋಗ ಬಯಸುವ ಆಕಾಂಕ್ಷಿಗಳಿಂದ ಅರ್ಜಿ ಪಡೆಯುವ ಸಂಸ್ಥೆಗಳು ವಿದೇಶಾಂಗ ಇಲಾಖೆಯ ಅಧೀನ ಸಂಸ್ಥೆಯಾದ ಪ್ರೊಟೆಕ್ಟರ್ ಆಫ್ ಇಮಿಗ್ರೆಂಟ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂ ಡಿರಬೇಕು. ಕಳೆದ ಕೆಲವು ವರ್ಷಗಳಿಂದ ನೋಂದಣಿ ಮಾಡಿಕೊಳ್ಳದ ಕೆಲ ಸಂಸಥೆಗಳು ರ್ಜಿಗಳನ್ನು ಆಹ್ವಾನಿಸಿ ಉದ್ಯೋಗಾರ್ಥಿಗಳಿಂದ ಕೋಟ್ಯಂತರ ರೂ. ವಂಚಿಸಿರುವ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ.
ಹೈರ್ ಗ್ಲೋ ಎಲಿಗೆಂಟ್ ಓವರ್ಸೀಸ್ ಇಂಟರ್ನ್ಯಾಷನಲ್ ಪ್ರೈ. ಲಿ., ಸುಮಾರು 300 ಮಂದಿಯಿಂದ 9 ಕೋಟಿ ರೂ.ಗಳಿಗೂ ಅಧಿಕ ಮೊತ್ತ, ದಿ ಲೆಜೆಂಡ್ ಐಇಎಲ್ಟಿಎಸ್ ಸಂಸ್ಥೆಯು ಸುಮಾರು 75 ಜನರಿಂದ ತಲಾ 1.5 ಲಕ್ಷ ರೂ.ನಿಂದ 8 ಲಕ್ಷ ರೂ.ವರೆಗೆ ಪಡೆದು ವಂಚಿಸಿದೆ. ಈ ಸಂಸ್ಥೆಗಳ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಪ್ರೊಟೆಕ್ಟರ್ ಆಫ್ ಇಮಿಗ್ರೆಂಟ್ಸ್ ಕಚೇರಿಯ ಮಾಹಿತಿಯ ಪ್ರಕಾರ ಮಂಗಳೂರಿನ ಝೀರೆನ್ ರಿಕ್ವಾರ್ಮೆಂಟ್ ಏಜೆನ್ಸಿ ಹಾಗೂ ಯುರೋಪ್ ಇಸ್ರೇಲ್ ಮೌರಿಷ್ ಏಜೆನ್ಸಿಗಳು ಕೂಡಾ ನೋಂದಣಿ ಮಾಡಿಕೊಳ್ಳದೆ ಉದ್ಯೋಗಾರ್ಥಿಗಳಿಂದ ಅಕ್ರಮವಾಗಿ ಅರ್ಜಿ ಹಾಗೂ ಹಣ ಪಡೆದಿರುವ ಆರೋಪವಿದೆ.
ಈ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ವಹಿಸಬೇಕು. ವಂಚನೆ ಮಾಡಿರುವ ವರನ್ನು ಬಂಧಿಸಬೇಕು. ವಿದೇಶ ಉದ್ಯೋಗದ ಬಗ್ಗೆ ಹಾಗೂ ಅದರ ನೋಂದಣಿಯ ಬಗೆಗ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಒದಗಿಸಬೇಕು. ವಿದೇಶದಲಲಿ ಉದ್ಯೋಗ ನೀಡುವ ಹಾಗೂ ವಿದೇಶಾಂಗ ಇಲಾಖೆಯಡಿ ಮಾನ್ಯತೆ ಪಡೆದಿರುವ ಸಂಸ್ಥೆಗಳ ಮಾಹಿತಿಯನ್ನು ಒದಗಿಸಬೇಕು. ವಿದೇಶ ಉದ್ಯೋಗದ ಅರ್ಜಿ ಆಹ್ವಾನಿಸುವ ಹಾಗೂ ಜಾಹೀರಾತು ನೀಡುವ ಸಂಸ್ಥೆಗಳ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.