
ಮಂಜೇಶ್ವರದಲ್ಲಿ ಕಾರಿಗೆ ಬಸ್ಸು ಢಿಕ್ಕಿ: ವರ್ಕಾಡಿಯ ಗಾಯಾಳು ಯುವಕ ಮೃತ್ಯು
Sunday, June 1, 2025
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಮಂಜೇಶ್ವರ ರಾಗಂ ಜಂಕ್ಷನ್ ಬಳಿ ಕಾರಿಗೆ ಬಸ್ಸು ಢಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದು, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಮೇ 30ರಂದು ಬೆಳಗ್ಗೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ವರ್ಕಾಡಿ ತೋಕೆ ನಿವಾಸಿಗಳಾದ ಕೆಲ್ವಿನ್ ಡಿಸೋಜ (18), ಪ್ರಜ್ವಲ್ (24), ಪ್ರೀತಂ (19) ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಪೈಕಿ ಕೆಲ್ವಿನ್ ಡಿ’ಸೋಜಾ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಮೃತ ಕೆಲ್ವಿನ್ ವರ್ಕಾಡಿ ತೋಕೆ ನಿವಾಸಿ ಸಿಪ್ರಿಯನ್ ಡಿ’ಸೋಜಾ ಅವರ ಪುತ್ರನಾಗಿದ್ದು, ಅಪಘಾತದ ಸಂದರ್ಭದಲ್ಲಿ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದನೆಂದು ತಿಳಿದು ಬಂದಿದೆ.