
ಎರಡು ಗೋಣಿ ಚೀಲದಲ್ಲಿ 32.05 ಕೆಜಿ ಗಾಂಜಾ ಪತ್ತೆ: ಓರ್ವನ ಬಂಧನ
Sunday, June 1, 2025
ಮಂಜೇಶ್ವರ: ಮಂಗಲ್ಪಾಡಿಯ ಸೋಂಕಾಲ್ ಕೊಡಂಗೆಯಲ್ಲಿ ಭಾರಿ ಪ್ರಮಾಣದ ಗಾಂಜಾವನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎರಡು ಗೋಣಿ ಚೀಲದಲ್ಲಿ ತುಂಬಿಸಿ, ಕಟ್ಟಿಟ್ಟ ಸ್ಥಿತಿಯದ್ದ 32.05 ಕೆ.ಜಿ. ಗಾಂಜಾದೊಂದಿಗೆ ಕೊಡಂಗೆಯ ಕೌಶಿಕ್ ನಿಲಯದ ನಿವಾಸಿ ಎ. ಅಶೋಕ (45) ಎಂಬಾತನನ್ನು ಪೊಲೀಸರು ಶನಿವಾರ ರಾತ್ರಿ 11 ಗಂಟೆ ವೇಳೆ ಮನೆಯಲ್ಲಿ ಬಂಧಿಸಿದ್ದಾರೆ.
ಪೊಲೀಸರು ನಡೆಸಿದ ಶೋಧದಲ್ಲಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಬಂಧಿಸಿದ ಅಶೋಕ್‌ರನ್ನು ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಇ. ಅನೂಪ್ ಕುಮಾರ್, ಎಸ್.ಐ. ಉಮೇಶನ್ ನೇತೃತ್ವದ ತಂಡ ಗಾಂಜಾವನ್ನು ವಶಪಡಿಸಿದ್ದಾರೆ.