ವಾಲ್ಪಾಡಿ: ಶುಕ್ರವಾರ ಕಾಲು ಜಾರಿ ನೀರಿಗೆ  ಬಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

ವಾಲ್ಪಾಡಿ: ಶುಕ್ರವಾರ ಕಾಲು ಜಾರಿ ನೀರಿಗೆ ಬಿದ್ದ ವ್ಯಕ್ತಿಯ ಮೃತ ದೇಹ ಪತ್ತೆ


ಮೂಡುಬಿದಿರೆ: ಕಳೆದ ಎರಡು ದಿನಗಳ ಹಿಂದೆ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ಕಾಲು ಜಾರಿ  ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಆನೆಗುಡ್ಡೆಯ ಗುರುಪ್ರಸಾದ್ ಅವರ ಮೃತದೇಹವನ್ನು ಈಜು ತಜ್ಞ ಈಶ್ವರ್ ಮಲ್ಪೆ ಅವರು ಮೇಲಕ್ಕೆತ್ತಿದ್ದಾರೆ.

ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ  ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿತ್ತು ಅದರ ಹಲಗೆಯನ್ನು ತೆಗೆಯಲೆಂದು ಗುರುಪ್ರಸಾದ್ ಅವರು ಕೆಳಗಿಳಿಯುತ್ತಿದ್ದ ಸಂದಭ೯ದಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದರು. 

ಭಾನುವಾರ ಈಶ್ವರ್ ಮಲ್ಪೆ ಅವರ ತಂಡ ನೀರಿಗೆ ಇಳಿದು ಹುಡುಕಾಟ ನಡೆಸಿ ಮೃತ ದೇಹವನ್ನು ಪತ್ತೆ ಮಾಡಿ ಮೇಲಕ್ಕೆತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article