
ಹೋಟೆಲ್ ಕಾರ್ಮಿಕ ಮೃತ್ಯು
ಮಂಜೇಶ್ವರ: ಹೋಟೆಲ್ ಕಾಯಕದ ನಡುವೆ ಕುಕ್ ಓರ್ವರು ತೀವ್ರ ಅಸೌಖ್ಯಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ.
ಏಳ್ಕಾನ ಬಾಳೆಗುಳಿ ನಿವಾಸಿ ದಿ. ಶಿವ ನಾಯ್ಕರ ಪುತ್ರ ಗೋವಿಂದ ನಾಯ್ಕ (51) ಮೃತ ವ್ಯಕ್ತಿ. ಇವರು ಮೈಸೂರು ಸಮೀಪ ಹೋಟೇಲ್ ವೊಂದರಲ್ಲಿ ಅಡುಗೆ ವೃತ್ತಿಗೆಂದು ತೆರಳಿದ್ದು ಕೆಲಸದ ಸ್ಥಳದಲ್ಲಿ ಮೃತಪಟ್ಟ ಬಗ್ಗೆ ಮನೆಯವರಿಗೆ ಇಂದು ಬೆಳಗ್ಗೆ ಮಾಹಿತಿ ಲಭಿಸಿದೆ.
ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಗೋವಿಂದ ನಾಯ್ಕರು ಕಳೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್‌ಗೆ ಕಾಂಗ್ರೆಸನ್ನು ಪ್ರತಿನಿಧಿಕರಿಸಿ ಸ್ಪರ್ಧಿಸಿದ್ದರು. ಪ್ರಸ್ತುತ ಎಣ್ಮಕಜೆ ಮಂಡಲ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದಾರೆ. ಏಳ್ಕಾನ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಸ್ಥಾಪಕ ಸದಸ್ಯರಾಗಿ ಬಳಿಕ ಅಧ್ಯಕ್ಷರಾಗಿ, ಇದೀಗ ಸದಸ್ಯರಾಗಿ ಸಕ್ರಿಯರಾಗಿದ್ದರು. ಹವ್ಯಾಸಿ ರಂಗ ಕಲಾವಿದರಾದ ಇವರು ಮರಾಟಿ ಜನಾಂಗದ ಕಲಾರಾಧನೆಯಾದ ಬಾಲೆಸಾಂತು ಕಲಾ ಪ್ರಕಾರವನ್ನು ಪರಂಪರಾಗತವಾಗಿ ಪ್ರದರ್ಶಿಸುವಲ್ಲಿ ಜನಪ್ರಿಯರಾಗಿದ್ದರು.
ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್., ಮಂಡಲ ಕಾಂಗ್ರೆಸ್ ಸಮಿತಿ, ಶ್ರೀಕೃಷ್ಣ ಸೇವಾ ಸಮಿತಿ ಏಳ್ಕಾನ ಸಂತಾಪ ವ್ಯಕ್ತಪಡಿಸಿದೆ.