
ಮೂಡುಬಿದಿರೆಯಲ್ಲಿ ಆಚಾರ್ಯ 108 ಗುಲಾಬ್‌ಭೂಷಣ್ ಮಹಾರಾಜರ ಚಾತುರ್ಮಾಸ
Thursday, June 19, 2025
ಮೂಡುಬಿದಿರೆ: ಕುಂಥುಸಾಗರಜಿ ಮಹಾರಾಜರಿಂದ ಆಚಾರ್ಯ ಪದವಿ ಪಡೆದ ಜ್ಞಾನಿ ಆಚಾರ್ಯ 108 ಗುಲಾಬ್ ಭೂಷಣ್ ಮಹಾರಾಜರ ಚಾತುರ್ಮಾಸವು ಜೈನಮಠದಲ್ಲಿ ನಡೆಯಲಿದೆ ಎಂದು ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದರು.
ಜೂ.20ರಂದು ಬೆಳಗ್ಗೆ 8 ಗಂಟೆಗೆ ಮೂಡುಬಿದಿರೆ ಪುರಪ್ರವೇಶ ಮಾಡಲಿರುವ ಮುನಿಮಹರಾಜರನ್ನು ಸಮಾಜ ಬಾಂಧವರು ಬಡಗುಬಸದಿ ಬಳಿ ಸ್ವಾಗತಿಸಿ ಮೆರವಣಿಗೆ ಮೂಲಕ ಜೈನಮಠಕ್ಕೆ ಬರಮಾಡಿಕೊಳ್ಳಲಾಗುವುದು.ಜುಲೈ 9ರಂದು ಕಲಶ ಪ್ರತಿಷ್ಟೆಯ ಮೂಲಕ ಚಾತುರ್ಮಾಸ ಆರಂಭವಾಗಲಿದ್ದು, ನಾಲ್ಕು ತಿಂಗಳ ಕಾಲ ನಡೆಯಲಿದೆ. ಈ ವೇಳೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಬಸದಿಗಳ ಮೊಕ್ತೇಸರ ಪಟ್ನಶೆಟ್ಟಿ ಸುಧೇಶ್ ಕುಮಾರ್, ಸ್ವಾಗತ ಸಮಿತಿಯ ಸಂಚಾಲಕ ಬಾಹುಬಲಿ ಪ್ರಸಾದ್, ಉದ್ಯಮಿ ಶೈಲೇಂದ್ರ ಕುಮಾರ್, ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.