ಮೂಡುಬಿದಿರೆಯಲ್ಲಿ ರೂ 25ರಲ್ಲಿ ದಿನದ ಊಟ-ತಿಂಡಿಯ ಭಾಗ್ಯ: ಇಂದಿರಾ ಕ್ಯಾಂಟೀನ್ ಲೋಕಾಪ೯ಗೊಳಿಸಿದ ಉಸ್ತುವಾರಿ ಸಚಿವರು

ಮೂಡುಬಿದಿರೆಯಲ್ಲಿ ರೂ 25ರಲ್ಲಿ ದಿನದ ಊಟ-ತಿಂಡಿಯ ಭಾಗ್ಯ: ಇಂದಿರಾ ಕ್ಯಾಂಟೀನ್ ಲೋಕಾಪ೯ಗೊಳಿಸಿದ ಉಸ್ತುವಾರಿ ಸಚಿವರು


ಮೂಡುಬಿದಿರೆ: ಸರಕಾರದ ಸೌಲಭ್ಯಗಳು ಬಡವರಿಗೆ ನೇರವಾಗಿ ಸಿಗಬೇಕೆಂದುಕೊಂಡು ಹಲವಾರು ಯೋಜನೆಗಳನ್ನು ಜಾರಿಗೆ ತಂದವರು ಇಂದಿರಾಗಾಂಧಿಯವರು. ಅವರ ಪರಿಕಲ್ಪನೆಯನ್ನು ಮುಂದುವರೆಸಿಕೊಂಡು ಬಂದಿರುವ ಸಿದ್ಧರಾಮಯ್ಯ ಅವರು ಅಸಂಘಟಿತ ಕಾರ್ಮಿಕರು, ಬಡವರು ಹಸಿವಿನಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ  ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನನ್ನು ಆರಂಭಿಸಿ 25 ರೂಪಾಯಿಯಲ್ಲಿ ಬಡವನ ದಿನದ ಹಸಿವನ್ನು ನೀಗಿಸುವ ಭಾಗ್ಯವನ್ನು ಕರುಣಿಸಿದ್ದಾರೆ  ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.


ಅವರು ಮೂಡುಬಿದಿರೆ ಆಡಳಿತ ಸೌಧದ ಎದುರು ಇಂದಿರಾ ಕ್ಯಾಂಟೀನನ್ನು ಲೋಕಾಪ೯ಣೆಗೊಳಿಸಿ ಮಾತನಾಡಿದರು. 


ಬಡವರ ಭದ್ರತೆಗಾಗಿ ಸಿದ್ಧರಾಮಯ್ಯ ಸರಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ, ಅನುಷ್ಠಾನ ಮಾಡಿದೆ ಮತ್ತು ಜನರಿಗೆ ಮುಟ್ಟಿಸಿದೆ ಹಾಗೂ ಗ್ಯಾರಂಟಿ ಯೋಜನೆಗಳನ್ನು ನೀಡಿದೆ ಎಂದ ಅವರು ಹಸಿವು ನೀಗಿಸುವ ಇಂತಹ ಉತ್ತಮ ಸೌಲಭ್ಯ ದೇಶದ ಬೇರೆ ಯಾವ ರಾಜ್ಯಗಳಲ್ಲು ಇಲ್ಲ. ಅಭಿವೃದ್ಧಿಯಲ್ಲಿ ರಾಜಕೀಯ ಬೇಡ. ಸರಕಾರದ ಯೋಜನೆಗಳು ಜನರಿಗೆ ನೇರವಾಗಿ ಸಿಗಬೇಕೆಂಬುದು ಎಲ್ಲರ ಉದ್ದೇಶವಾಗಬೇಕು ಎಂದರು. 


ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ 'ಹಸಿವು ಮುಕ್ತ ಕರ್ನಾಟಕ' ಎಂಬ ಧ್ಯೇಯದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದಾರೆ. ಬಿಜೆಪಿ ಆಡಳಿತ ಅವಧಿಯಲ್ಲಿ ಈ ಯೋಜನೆಗೆ ಹಿನ್ನಡೆ ಆಗಿತ್ತು ಆದರೆ ಇದೀಗ ಮತ್ತೆ ಈ ಯೋಜನೆಯನ್ನು ಆರಂಭಿಸಿದ್ದಾರೆ ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿದರು. 

ಅಪರ ಜಿಲ್ಲಾಧಿಕಾರಿ ಸಂತೋಷ್, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್,  ಉಪಾಧ್ಯಕ್ಷ ನಾಗರಾಜ ಪೂಜಾರಿ,ಸದಸ್ಯರಾದ ಶಕುಂತಳಾ, ಪಿ.ಕೆ. ಥೋಮಸ್, ಕೊರಗಪ್ಪ, ಸುರೇಶ್ ಕೋಟ್ಯಾನ್, ಜೊಸ್ಸಿ ಮಿನೇಜಸ್, ಸುರೇಶ್ ಪ್ರಭು, ರೂಪಾ ಶೆಟ್ಟಿ, ಮುಡಾ ಅಧ್ಯಕ್ಷ ಹಷ೯ವಧ೯ನ್ ಪಡಿವಾಳ್,ಕಾಂಗ್ರೆಸ್ ಮುಖಂಡ ಮಿಥುನ್ ರೈ, ಸಹಾಯಕ ಕಾಯ೯ಪಾಲಕ ಅಭಿಯಂತರ ತೇಜ್ ಮೂತಿ೯, ತಾಲೂಕು ಕಾಯ೯ನಿವ೯ಣಾಧಿಕಾರಿ ಕುಸುಮಾಧರ, ಪಿಡಿ ಜಯಲಕ್ಷ್ಮೀ, ಮುಖ್ಯಾಧಿಕಾರಿ ಇಂದು ಎಂ. ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. 

ಪುರಸಭಾ ಕಂದಾಯ ಅಧಿಕಾರಿ ಜ್ಯೋತಿ ಕಾಯ೯ಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article