
ಮುಂದಿನ ವರ್ಷ ಆಳ್ವಾಸ್‌ನಿಂದ ಮೆಡಿಕಲ್ ಕಾಲೇಜು ಪ್ರಾರಂಭ: ಮೋಹನರಾಗ ಕಾರ್ಯಕ್ರಮದಲ್ಲಿ ಡಾ. ಆಳ್ವ ಘೋಷಣೆ
Sunday, June 1, 2025
ಮೂಡುಬಿದಿರೆ: ಕಳೆದ ಮೂರುವರೆ ದಶಕಗಳಿಂದ ನನಗೆ ಮತ್ತು ಆಳ್ವಾಸ್ ಸಂಸ್ಥೆಗೆ ಮೂಡುಬಿದಿರೆ ಹಾಗೂ ನಾಡಿನ ಜನ ತುಂಬು ಹೃದಯದ ಪ್ರೀತಿಯನ್ನು ನೀಡಿದ್ದೀರಿ ಆಳ್ವಾಸ್ ಸಂಸ್ಥೆ ಶಿಕ್ಷಣ, ಆರೋಗ್ಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಿದ್ದೀರಿ. ಮುಂದಿನ ವರ್ಷ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಮೆಡಿಕಲ್ ಕಾಲೇಜು ಪ್ರಾರಂಭಿಸಲಿದ್ದೇವೆ. ಸದ್ದಿಲದೆ ಮಿಜಾರು ಶೋಭಾವನದಲ್ಲಿ ಸೇವೆ ಮಾಡುತ್ತಿರುವ ಮದ್ಯವರ್ಜನ ಹಾಗೂ ಮಾನಸಿಕ ರೋಗಿಗಳ ಆಸ್ಪತ್ರೆಯನ್ನು 100 ಬೆಡ್‌ಗಳೊಂದಿಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಘೋಷಿಸಿದರು.
ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಶನಿವಾರ ಸಾಯಂಕಾಲ ನಡೆದ `ಮೋಹನರಾಗ- ನೆನಪುಗಳ ಜೊತೆ ಪಯಣ' ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1981ರಲ್ಲಿ ಪ್ರಾರಂಭವಾದ ಆಳ್ವಾಸ್ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಆಳ್ವಾಸ್‌ನ 61 ಮಂದಿ ಕ್ರೀಡಾ ವಿದ್ಯಾರ್ಥಿಗಳು ಅಂತಾರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. 12 ಕ್ರೀಡಾಪಟುಗಳು ಒಲಿಂಪಿಕ್, 32 ವಿದ್ಯಾರ್ಥಿಗಳು ಜಾಗತಿಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಶೈಕ್ಷಣಿಕವಾಗಿಯೂ ಪ್ರತಿ ವರ್ಷ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್, ಚೌಟರ ಅರಮನೆಯ ಕುಲದೀಪ ಎಂ., ಭಾರತ್ ಸ್ಕೌಟ್‌ಗೈಡ್ಸ್ ರಾಜ್ಯ ಮುಖ್ಯ ಆಯುಕ್ತಿ ಪಿ.ಜಿ.ಆರ್ ಸಿಂಧಿಯಾ, ಪ್ರಮುಖರಾದ ಡಾ.ಕೆ ಪ್ರಕಾಶ್ ಶೆಟ್ಟಿ, ಶಶಿಧರ ಶೆಟ್ಟಿ ಬರೋಡ, ಕೆ.ಶ್ರೀಪತಿ ಭಟ್, ಸೀತಾರಾಮ ಆಳ್ವ, ಬಾಲಕೃಷ್ಣ ಆಳ್ವ, ಮೀನಾಕ್ಷಿ ಆಳ್ವ, ಜಯಶ್ರೀ ಅಮರನಾಥ ಶೆಟ್ಟಿ, ರಾಮಚಂದ್ರ ಆಳ್ವ, ಸುರೇಶ್ ಭಂಡಾರಿ ಕಡಂದಲೆ, ಮಿಜಾರುಗುತ್ತು ಶ್ರೀನಿವಾಸ ಆಳ್ವ, ಪಟ್ಲ ಸತೀಶ್ ಶೆಟ್ಟಿ ಸಹಿತ ಗಣ್ಯರು ಭಾಗವಹಿಸಿದರು.