
ಜವನೆರ್ ಬೆದ್ರ ಯುವ ಸಂಘಟನೆಯಿಂದ ಕದಂಬ ವನ ಅಭಿಯಾನ
ಮೂಡುಬಿದಿರೆ: ಜವನೆರ್ ಬೆದ್ರ ಯುವ ಸಂಘಟನೆ ವತಿಯಿಂದ 4ನೇ ವರ್ಷದ ಕದಂಬ ವನ ಅಭಿಯಾನ ಭಾನುವಾರ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿರುವ ಪುರಾತನ ಮಾರಿಗುಡಿ ಪರಿಸರದಲ್ಲಿ ಕದಂಬ ಮರದ ಗಿಡಗಳನ್ನು ನೆಡುವ ಮೂಲಕ ನಡೆಯಿತು.
ಸಂಘಟನೆಯ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಜವನೆರ್ ಬೆದ್ರ ಸಂಘಟನೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಿಂದ ತನ್ನದೇ ಅದ ಛಾಪು ಮೂಡಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಮೂಡುಬಿದಿರೆ ಪರಿಸರದಲ್ಲಿರುವ ಹಲವಾರು ದೇವಿ ದೇವಸ್ಥಾನಗಳಲ್ಲಿ 'ಕದಂಬ' ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ 80ಕ್ಕೂ ಅಧಿಕ ಗಿಡಗಳನ್ನು ದೇವಸ್ಥಾನದ ಪರಿಸರ, ಸಂಘಟಕರ ಮನೆಗಳ ಬಳಿ ಹಾಗೂ ಇನ್ನಿತರ ಹಲವಾರು ಸ್ಥಳಗಳಲ್ಲಿ 'ಕದಂಬ' ಗಿಡಗಳನ್ನು ನೇಡಲಾಗಿದೆ. ಅಬ್ಬಕ್ಕ ಬ್ರಿಗೇಡ್ ಸಂಘಟನೆಯ ಮಹಿಳೆಯರು ಗಿಡಗಳನ್ನು ಪೋಷಿಸಲಿದ್ದಾರೆ ಎಂದರು.
ಅರಣ್ಯ ಇಲಾಖೆಯ ಎ.ಸಿ.ಎಫ್. ಶ್ರೀಧರ್ ಪಿ., ದ.ಕ. ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ., ನಿವೃತ್ತ ಸೈನಿಕ ರಾಜೇಂದ್ರ ಜಿ. ಮುಖ್ಯ ಅತಿಥಿಗಳಾಗಿದ್ದರು.
ಜವನೆರ್ ಬೆದ್ರ ಯುವ ಸಂಘಟನೆ ಸಂಚಾಲಕ ನಾರಾಯಣ ಪಡುಮಲೆ, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಪೂಜಾರಿ, ಅಬ್ಬಕ್ಕ ಬ್ರಿಗೇಡ್ ಸಂಚಾಲಕರಾದ ಸಹನಾ ನಾಯಕ್, ಸಾರಿಕಾ ಹೆಗಡೆ, ಸುಮಲತಾ ಶೆಟ್ಟಿ ಉಪಸ್ಥಿತರಿದ್ದರು.
ಸಂದೀಪ ಕೆಲ್ಲಪುತ್ತಿಗೆ ಕಾಯ೯ಕ್ರಮ ನಿರೂಪಿಸಿದರು.