ಅಲಂಗಾರು ಲಯನ್ಸ್‌ ಅಧ್ಯಕ್ಷರಾಗಿ ಅಮಿತ್‌ ಡಿಸಿಲ್ವ ಆಯ್ಕೆ

ಅಲಂಗಾರು ಲಯನ್ಸ್‌ ಅಧ್ಯಕ್ಷರಾಗಿ ಅಮಿತ್‌ ಡಿಸಿಲ್ವ ಆಯ್ಕೆ


ಮೂಡುಬಿದಿರೆ: ಅಲಂಗಾರು ಲಯನ್ಸ್ ಕ್ಲಬ್ 2025-26ನೇ ಸಾಲಿನ ಅಧ್ಯಕ್ಷ ಅಮಿತ್ ಡಿಸಿಲ್ವ, ಕಾರ್ಯದರ್ಶಿಯಾಗಿ ರಿಚರ್ಡ್ ಡಿಸೋಜ ಹಾಗೂ ಕೋಶಾಧಿಕಾರಿಯಾಗಿ ರಾಕಿ ಮಸ್ಕರೇನಸ್ ಆಯ್ಕೆಯಾಗಿದ್ದಾರೆ. 

ನಿಕಟಪೂರ್ವ ಅಧ್ಯಕ್ಷರಾಗಿ ಲೀನಾ ಜೆಸಿಂತಾ ಡಿಮೆಲ್ಲೋ, ಉಪಾಧ್ಯಕ್ಷರುಗಳಾಗಿ ಫೆಲಿಕ್ಸ್ ಡಿಸೋಜ, ಸುನಿಲ್ ಮೆಂಡೋನ್ಸಾ ಇತರ ಪದಾಧಿಕಾರಿಗಳಾಗಿ ರಿಚರ್ಡ್ ಬರ್ಬೋಜ, ರೊನಾಲ್ಡ್ ಕರ್ಡೋಜ, ಚಾರ್ಲ್ಸ್ ಫೆರ್ನಾಂಡಿಸ್‌, ಜಾನ್ ದಾಂತಿ ಹಾಗೂ ಆಲ್ವಿನ್ ಸಾಂಕ್ಟಿಸ್ ಆಯ್ಕೆಯಾಗಿದ್ದಾರೆ.

ಕ್ಲಬ್ ನಿರ್ದೇಶಕರುಗಳಾಗಿ ರೆ.ಫಾ. ಬಾಸಿಲ್ ವಾಸ್., ಆರ್.ಕೆ. ಭಟ್, ಜೆರಾಲ್ಡ್ ಲೋಬೋ, ಮನೋಹರ್ ಕುಟಿನ್ಹಾ, ಹರ್ಮನ್ ರೋಡ್ರಿಗಸ್, ಹೆರಾಲ್ಡ್ ತಾವೋ, ಹರ್ಮನ್ ಡಿಸಿಲ್ವ, ವಿನೋದ್ ನಜ್ರೆತ್‌, ಲಾಯ್ಡ್ ರೇಗೋ, ಮೈಕಲ್ ಸಿಕ್ಕೇರಾ, ಆಲ್ವಿನ್ ಡಿಕುನ್ಹಾ ಹಾಗೂ ರಾಜಾ ಡಿಸೋಜ ಆಯ್ಕೆಯಾಗಿದ್ದಾರೆ. 

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 5 ರಂದು ಕಡಲಕೆರೆಯ ಸೃಷ್ಟಿ ಗಾರ್ಡನ್ ಹಾಲ್‌ನಲ್ಲಿ ಜರಗಲಿದ್ದು 2022-23ನೇ ಸಾಲಿನ ಜಿಲ್ಲಾ ಮುಖ್ಯ ಜಿಎಂಟಿ ಕಾರ್ಡಿನೇಟರ್ ಪ್ರಶಾಂತ್ ಬಿ. ಶೆಟ್ಟಿ ಪದಗ್ರಹಣ ಅಧಿಕಾರಿಯಾಗಿರುವರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article