
ಬಳ್ಕುಂಜೆ ಗ್ರಾ.ಪಂ. ಮುಂಭಾಗ ಬಿಜೆಪಿ ಮಂಡಲದಿಂದ ಪ್ರತಿಭಟನೆ
Monday, June 23, 2025
ಮೂಡುಬಿದಿರೆ: ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದ ವತಿಯಿಂದ ಬಳ್ಕುಂಜೆ ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯಿತು.
ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಂಚಾಯತ್ ಅಧ್ಯಕ್ಷೆ ಮಮತಾ ಡಿ. ಪೂಂಜ, ಉಪಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಸದಸ್ಯರಾದ ಗೀತಾ, ಆನಂದ್ ಕೆ., ಶಾಂತಾ, ಮಹಿಳಾ ಮೋಚಾ೯ದ ಪ್ರಧಾನ ಕಾಯ೯ದಶಿ೯ ರಶ್ಮಿ ಆಚಾಯ೯, ಕಾಯ೯ದಶಿ೯ ಜಯಲಕ್ಷ್ಮೀ ಕೆ.,ಹಿರಿಯರಾದ ರಾಮ ಕೋಟ್ಯಾನ್, ಕೇಸರಿ ಪಿ. ರೈ, ಬೂತ್ ಅಧ್ಯಕ್ಷರು, ಕಾಯ೯ದಶಿ೯, ಬಿಜೆಪಿ ಕಾಯ೯ಕತ೯ರು ಮತ್ತು ಸಾವ೯ಜನಿಕರು ಭಾಗವಹಿಸಿದ್ದರು.