
ಪಡುಮಾರ್ನಾಡು ಯುವಕ ಮಂಡಲದಿಂದ ಪುಸ್ತಕ ವಿತರಣೆ
Sunday, June 8, 2025
ಮೂಡುಬಿದಿರೆ: ಯುವಕ ಮಂಡಲ ಪಡುಮಾರ್ನಾಡು ಹಾಗೂ ಪ್ರಜ್ಞಾ ಯುವತಿ ಮಂಡಲ ಇದರ ಜಂಟಿ ಆಶ್ರಯದಲ್ಲಿ ಮಹಾವೀರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಪ್ರತೀ ವರ್ಷ ಕೊಡಮಾಡುವ ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ನೋಟ್ಸ್ ಪುಸ್ತಕ ಹಾಗೂ ಇನ್ನಿತರ ಲೇಖನ ಸಾಮಗ್ರಿಗಳನು ನೀಡಲಾಯಿತು .
ಯುವಕ ಮಂಡಲದ ಅಧ್ಯಕ್ಷ ವೈಷ್ಣವ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಶಾಲಾ ಸಂಚಾಲಕ ಎಂ.ಆರ್ ಬಲ್ಲಾಳ್,ನಿವೃತ್ತ ಶಿಕ್ಷಕ ಜಯ ಬಿ, ಪಂಚಾಯತ್ ಸದಸ್ಯರಾದ ರಮೇಶ್ ಎಸ್ ಶೆಟ್ಟಿ , ಯುವಕ ಮಂಡಲದ ಸದಸ್ಯರಾದ ಸಂತೋಷ್ ಕೋಟ್ಯಾನ್ ,ಸಂತೋಷ್ ಆರ್ ಶೆಟ್ಟಿ ,ಯತೀಶ್ ಕುಮಾರ್ ,ದಿನಕರ ಮರ್ನಾಡ್ , ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಅಮನೊಟ್ಟು ಒಕ್ಕೂಟದ ಅಧ್ಯಕ್ಷ ಸುರೇಂದ್ರ ಪೂಜಾರಿ ,ಯುವತಿ ಮಂಡಲದ ಅಧ್ಯಕ್ಷೆ ಶೋಭಾ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಪ್ರತಿಭಾ ವಂದಿಸಿದರು.