
ಜೈನಕಾಶಿ ಮೂಡುಬಿದಿರೆಯ ಕೆರೆಗಳು, ಕೊಳಗಳು ಅಧ್ಯಯನಾತ್ಮಕ ಕೃತಿ ಬಿಡುಗಡೆ
ಮೂಡುಬಿದಿರೆ: ನೀರು ಜೀವನದ ಅಂಶ ಇದನ್ನು ಉಳಿಸುವ ಕೆಲಸ ಮಾಡಿದಾಗ ದೇವರ ಕೆಲಸ ಮಾಡಿದ ಪುಣ್ಯ ಲಭಿಸುತ್ತದೆ. ಕೆರೆಗಳನ್ನು ರಕ್ಷಿಸುವುದು ಮತ್ತು ಪಾಳು ಬಿದ್ದಿರುವ ಕೆರೆಗಳನ್ನು ಗುರುತಿಸಿ ಅವುಗಳನ್ನು ಪುನಶ್ಚೇತನಗೊಳಿಸುವುದು ಸಮಾಜ ಸೇವೆಯ ಶ್ರೇಷ್ಠ ಸಾಧನೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಸಿಡಿಡಿ ಇಂಡಿಯಾ, ರೋಟರಿ ಕ್ಲಬ್ ಮೂಡುಬಿದಿರೆ, ರೋಟರಿ ಚ್ಯಾರಿಟೇಬಲ್ ಟ್ರಸ್ಟ್, ಪುರಸಭೆ, ಎಸ್‌ಬಿಐ ಫೌಂಡೇಶನ್ ಸಹಿತ ಹಲವು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ರೂಪಿಸಲ್ಪಟ್ಟಿರುವ ಜೈನ ಕಾಶಿ ಮೂಡುಬಿದಿರೆಯ ಕೆರೆಗಳು ಮತ್ತು ಕೊಳಗಳು (ಲೇಕ್ಸ್ ಆ್ಯಂಡ್ ಟ್ಯಾಂಕ್ಸ್ ಆಫ್ ಜೈನಕಾಶಿ ಮೂಡುಬಿದಿರೆ) ಕೃತಿಯನ್ನು ಇಲ್ಲಿನ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕನ್ನಡ ಭವನದಲ್ಲಿ ಬುಧವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಕಡಲಕೆರೆಯನ್ನು ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ ಇಲಾಖೆಯಿಂದ ರೂ 9 ಕೋ. ವೆಚ್ಚದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದ್ದು ವಷ೯ ಪೂತಿ೯ ನೀರು ನಿಲ್ಲಿಸುವ ನಿಟ್ಟಿನಲ್ಲಿ ಕೃತಿಯನ್ನು
ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ ಪ್ರಕೃತಿ ಮೂಲವಾಗಿರುವ ಮುರಕಲ್ಲುಗಳನ್ನು ಬಳಸಿ ಹಿಂದೆ ಬಸದಿ, ದೇವಸ್ಥಾನ ಮತ್ತು ಕೋಟೆಗಳಿಗೆ ಆವರಣ ಗೋಡೆಗಳನ್ನು ನಿಮಿ೯ಸುತ್ತಿದ್ದರು. ಕಲ್ಲುಗಳನ್ನು ತೆಗೆದ ಜಾಗಗಳಲ್ಲಿ ಕೆರೆಗಳಾಗುತ್ತಿದ್ದು ಇವುಗಳಿಂದ ರೈತರಿಗೆ ಮತ್ತು ಕೃಷಿಗಳಿಗೆ ಅನುಕೂಲವಾಗುತ್ತಿತ್ತು ಆದ್ದರಿಂದ ಇಂತಹ ಜಲಮೂಲಗಳನ್ನು ಉಳಿಸಿ ಬೆಳೆಸುವಂತಹ ಕೆಲಸಗಳಾಗಬೇಕಿದೆ ಎಂದು ನುಡಿದರು.
ರೋಟರಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಪಿ.ಕೆ. ಥಾಮಸ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ರಾಜ್ಯಪಾಲ ವಿಕ್ರಮ್ ದತ್ತ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯೋಜನೆಯ ಉದ್ದೇಶವನ್ನು ತಿಳಿಸಿದರು.
ಸನ್ಮಾನ: ಪುತ್ತಿಗೆ ದೇವಸ್ಥಾನದ ಅಡಿಗಳ್ ಅನಂತಕೃಷ್ಣ, ಶ್ರೀ. ಕ್ಷೇ.ಧ.ಗ್ರಾ. ಯೋಜನೆಯ ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ಧನಂಜಯ, ಎಂ.ಆರ್.ಪಿಎಲ್, ಅಲಂಗಾರು ಸುಬ್ರಹ್ಮಣ್ಯ ಭಟ್, ಜಿ. ಉಮೇಶ ಪೈ, ಮಹಮ್ಮದ್ ಶರೀಫ್, ಬೆನಿಟಾ ಸೋನ್ಸ್, ರತ್ನಾಕರ ಭಟ್ ಇವರನ್ನು ಸಮ್ಮಾನಿಸಲಾಯಿತು.
ರೋಟರಿ ಅಧ್ಯಕ್ಷ ರವಿಪ್ರಸಾದ್ ಉಪಾಧ್ಯಾಯ, ಮಾಜಿ ಸಚಿವ ಅಭಯಚಂದ್ರ, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಎಸ್‌ಬಿಐ ಫೌಂಡೇಶನ್ ಆಡಳಿತ ನಿರ್ದೇಶಕ ಸಂಜಯ್ ಪ್ರಕಾಶ್, ಸಿಡಿಡಿ ಇಂಡಿಯಾದ ಹಷ೯ವಧ೯ನ, ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ಮಂಗಳೂರು ಐಸಿಟಿ ವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಪ್ರಶಸ್ತಿ: ಝೀರೋ ವೇಸ್ಟ್ ಕ್ಯಾಂಪಸ್ ಗಾಗಿ ಪುರಸಭೆಯಿಂದ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಪ್ರಶಸ್ತಿಯನ್ನು ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾಯ೯ದಶಿ೯ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಪ್ರಸಾದ್ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ರೋಟರಿ ಚಾರಿಟೆಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ. ಮುರಳೀಕೃಷ್ಣ ಆರ್.ವಿ. ಸ್ವಾಗತಿಸಿದರು. ಎಂ.,ಇತಿಹಾಸ ಸಂಶೋಧಕ ಡಾ. ಪಿ. ಗಣಪಯ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ. ಜೆ. ಪಿಂಟೋ ಮತ್ತು ಪರಿಸರ ಅಧಿಕಾರಿ ಶಿಲ್ಪಾ ಎಸ್. ಕಾಯ೯ಕ್ರಮ ನಿರೂಪಿಸಿದರು.