
ವರದಕ್ಷಿಣೆಗಾಗಿ ಕಿರುಕುಳ, ಜೀವ ಬೆದರಿಕೆ ಆರೋಪ: ಪ್ರಕರಣ ದಾಖಲು
Sunday, June 29, 2025
ಪುತ್ತೂರು: ಪತಿ ಹಾಗೂ ಆತನ ಮನೆಯವರು ಸೇರಿಕೊಂಡು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಜೀವ ಬೆದರಿಕೆ ಒಡ್ಡಿರುವುದು ಹಾಗೂ ಗಂಡ ತ್ರಿವಳಿ ತಲಾಕ್ ನೀಡಿರುವ ಬಗ್ಗೆ ಮಹಿಳೆಯೋರ್ವರ ದೂರಿನಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಕುಕ್ಕಾಜೆ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರಿ ಮುಮ್ತಾಝ್ ದೂರು ನೀಡಿದವರು.
ಮುಮ್ತಾಝ್ ಅವರ ಪತಿ ಪುತ್ತೂರು ತಾಲೂಕಿನ ಕೊಡಿಪಾಡಿ ಜೋಳ ಎಂಬಲ್ಲಿನ ನಿವಾಸಿ ಮುಹಮ್ಮದ್ ಶರೀಫ್, ಅತ್ತೆ ಖತೀಜಾ, ಮೈದುನ ಅಹಮದ್ ಸಿರಾಜುಲ್ ಮುನೀರ್, ನಾದಿನಿಯರಾದ ಸುಮಯ್ಯ, ಆಯಿಷಾ ಎಂಬವರ ವಿರುದ್ಧ ದೂರು ನೀಡಿದ್ದಾರೆ.
ಪತಿ ಹಾಗೂ ಆತನ ಮನೆಯವರು ಸೇರಿಕೊಂಡು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಜೀವ ಬೆದರಿಕೆ ಒಡ್ಡಿದ್ದಾರೆ ಹಾಗೂ ಜೂ.7 ರಂದು ಗಂಡ ನನ್ನ ತವರು ಮನೆಗೆ ಬಂದು ನನ್ನ ಅಮ್ಮನಿಗೆ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಮುಮ್ತಾಝ್ ದೂರಿನಲ್ಲಿ ತಿಳಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.