
ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ
Friday, June 6, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ) ಪುತ್ತೂರು, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಯಕ್ಷ ಕಲಾ ಕೇಂದ್ರ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಯಿತು.
‘ತಂಬಾಕಿನ ದುಷ್ಪರಿಣಾಮಗಳ ನೈಜತೆಯ ಅನಾವರಣ’ ಧ್ಯೇಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಸರ್ವಿಲೆನ್ಸ್ ಅಧಿಕಾರಿ ಮತ್ತು ಜಿಲ್ಲಾ ತಂಬಾಕು ಮುಕ್ತ ಕಾರ್ಯಕ್ರಮ ಅಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ತಂಬಾಕು ಮತ್ತು ಇನ್ನಿತರ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳು ಮತ್ತು ಸಂಬಂಧಿಸಿದ ಕಾನೂನು ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿಸ್ತ್ರತವಾಗಿ ತಿಳಿಸಿದರು.
ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೋ ಅವರು ವಿದ್ಯಾರ್ಥಿಗಳಿಗೆ ವಿಶ್ವ ತಂಬಾಕು ರಹಿತ ದಿನದ ಪ್ರತಿಜ್ಞಾವಿಧಿ ಭೋದಿಸಿದರು. ಮಾದಕ ವಸ್ತುಗಳಿಗೆ ವಿವಿಧ ರೀತಿಯಲ್ಲಿ ದಾಸರಾಗುವ ಪ್ರಕ್ರಿಯೆಗಳು ಮತ್ತು ಅದರಿಂದಾಗುವ ಅರೋಗ್ಯದ ವೈಪರಿತ್ಯಗಳ ಬಗ್ಗೆ ತಿಳಿಸಿದರು.
ವಿಶ್ವ ತಂಬಾಕು ರಹಿತ ದಿನದ ವಿಶೇಷ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಯಿತು. ವರ್ಣಚಿತ್ರ ಸ್ಪರ್ಧೆಯಲ್ಲಿ ಅಧೈತ ಕೆ. ದ್ವಿತೀಯ ಎಂಎಸ್ಸಿ (ಬೌತಶಾಸ್ತ್ರ) ಪ್ರಥಮ, ಗಣ್ಯಶ್ರೀ ಪ್ರಥಮ ಎಂಎಸ್ಸಿ (ಗಣಿತ )ದ್ವಿತೀಯ,ಮತ್ತು ಲಾವಣ್ಯ ಕೆ.ಎಂ. ಪ್ರಥಮ ಎಂಕಾಂ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ ಮತ್ತು ಬಿಲ್ ಫ್ರೆಡ್ ರೋಡ್ರಿಗಸ್ ಸಹಾಯಕ ನಿರ್ದೇಶಕ, ತಾಲೂಕು ಪಂಚಾಯತ್ ಪುತ್ತೂರು ಉಪಸ್ಥಿತರಿದ್ದರು.
ಯಕ್ಷ ಕಲಾ ಕೇಂದ್ರ ನಿರ್ದೇಶಕ ಪ್ರಶಾಂತ್ ರೈ ಸ್ವಾಗತಿಸಿ, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪ್ರತಿಮಾ ಕೆ. ವಂದಿಸಿದರು. ಪ್ರಣಮ್ಯ ಮತ್ತು ತಂಡದವರು ಪ್ರಾರ್ಥಿಸಿದರು.