ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ


ಸುಳ್ಯ: ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಬ್ಲಾಕ್ ಪಬ್ಲಿಕ್ ಹೆಲ್ತ್ ಲ್ಯಾಬ್ ಮತ್ತು ನೂತನ ಶವಗಾರ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. 

55 ಲಕ್ಷದ ಬ್ಲಾಕ್ ಪಬ್ಲಿಕ್ ಹೆಲ್ತ್ ಲ್ಯಾಬ್, 32 ಲಕ್ಷದಲ್ಲಿ ಐಸೋಲೇಷನ್ ವಾರ್ಡ್, 1.92 ಕೋಟಿ ವೆಚ್ಚದಲ್ಲಿ ಮಾಡಲಾದ ಕಾಮಗಾರಿಗಳಾದ ನೂತನ ಶವಾಗಾರ, ಹೊರ ರೋಗಿ ವಿಭಾಗದ ನವೀಕರಣ, ಆಸ್ಪತ್ರೆಯ ನವೀಕರಣ, ಡಯಾಲಿಸಿಸ್ ಕೇಂದ್ರದ ನವೀಕರಣ ಕಾಮಗಾರಿಗಳನ್ನು ಅವರು ಉದ್ಘಾಟಿಸಿ, ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನಿಡಿದ ಸಚಿವರು ಆಸ್ಪತ್ರೆಯ ಕೆಲಸ ಕಾರ್ಯಗಳ ಪರೀಶೀಲನೆ ನಡೆಸಿದರು.

ಐಸಿಯು, ಡಯಾಲಿಸಿಸ್ ಕೇಂದ್ರ, ಐಸೋಲೇಷನ್ ವಾರ್ಡ್, ಲ್ಯಾಬ್‌ಗಳು ಸೇರಿದಂತೆ ಅಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಕೆಲಸ ಕಾರ್ಯಗಳ ಬಗ್ಗೆ ಅವರು ಮಾಹಿತಿ ಪಡೆದರು.

ಶಾಸಕಿ ಭಾಗೀರಥಿ ಮುರುಳ್ಯ, ನ.ಪಂ. ಅಧ್ಯಕ್ಷೆ ಶಶಿಕಲಾ ಎ., ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್,  ತಹಶೀಲ್ದಾರ್ ಮಂಜುಳಾ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಜಿಲ್ಲಾ ಆರೋಗ್ಯಾಧಿಕಾರಿ ಹೆಚ್.ಆರ್.ತಿಮ್ಮಯ್ಯ, ತಾಲೂಕು ಆರೋಗ್ಯಾಧಿಕಾರಿ ತ್ರಿಮೂರ್ತಿ,  ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ, ಮುಖಂಡರಾದ ಧನಂಜಯ ಅಡ್ಪಂಗಾಯ, ಟಿ.ಎಂ. ಶಹೀದ್ ತೆಕ್ಕಿಲ್, ಜಿ.ಕೃಷ್ಣಪ್ಪ,  ಪಿ.ಸಿ.ಜಯರಾಮ, ರಾಧಾಕೃಷ್ಣ ಬೊಳ್ಳೂರು, ನಿತ್ಯಾನಂದ ಮುಂಡೋಡಿ, ಪಿ.ಎಸ್.ಗಂಗಾಧರ, ಗೀತಾ ಕೋಲ್ಚಾರ್, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ  ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಸರಸ್ವತಿ ಕಾಮತ್, ಬೆಟ್ಟ ಜಯರಾಮ ಭಟ್, ಇಕ್ಬಾಲ್ ಎಲಿಮಲೆ,  ಸೋಮಶೇಖರ ಕೊಯಿಂಗಾಜೆ, ರಾಧಾಕೃಷ್ಣ ಪರಿವಾರಕಾನ, ಶಹೀದ್ ಪಾರೆ, ಜಿ.ಕೆ.ಹಮೀದ್, ಕೆ.ಗೋಕುಲ್‌ದಾಸ್, ಮಹಮ್ಮದ್ ಕುಂಞಿ ಗೂನಡ್ಕ, ಧರ್ಮಪಾಲ ಕೊಯಿಂಗಾಜೆ, ರಾಧಾಕೃಷ್ಣ ಪರಿವಾರಕಾನ,ರಹೀಂ ಬೀಜದಕಟ್ಟೆ, ರಾಜು ಪಂಡಿತ್, ಭವಾನಿ ಶಂಕರ್ ಕಲ್ಮಡ್ಕ, ಶಾಫಿ ಕುತ್ತಮೊಟ್ಟೆ, ಚೇತನ್ ಕಜೆಗದ್ದೆ, ರಂಜಿತ್ ರೈ ಮೇನಾಲ, ಎಸ್.ಕೆ. ಹನೀಫ, ದಿನೇಶ್ ಅಂಬೆಕಲ್ಲು, ಫವಾಝ್ ಕನಕಮಜಲು ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. ಎಲುಬು ತಜ್ಞರು, ಜನರಲ್ ಸರ್ಜನ್, ತುರ್ತು ಚಿಕಿತ್ಸಾ ವೈದ್ಯರು, ಶುಶೂಷಕಾಧಿಕಾರಿಗಳು,ನೇತ್ರಾಧಿಕಾರಿ, ಕ್ಷಕಿರಣ ತಂತ್ರಜ್ಞರು, ಫಾರ್ಮಸಿಸ್ಟ್, ಪ್ರಯೋಗಶಾಲಾ ತಂತ್ರಜ್ಞರು, ಕಚೇರಿ ಸಹಾಯಕರು ಸೇರಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಬೇಕು, ಹೊಸ ನಗುಮಗು ಅಂಬಲೆನ್ಸ್ ನೀಡಬೇಕು, ಹೆಚ್ಚು ವಸತಿಗೃಹ ಒದಗಿಸಬೇಕು, ಸೆಕ್ಯೂರಿಟಿ ನೇಮಕಮಾಡಬೇಕು ಮತ್ತಿತರ ಬೇಡಿಕೆಗಳ ಮನವಿಯನ್ನು ಸಚಿವರಿಗೆ ಸಲ್ಲಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article