ಸಂವಿಧಾನ ಕಡೆಗಣನೆಯಿಂದಾಗಿ ದೇಶದಲ್ಲಿ ಕೋಮು ಗಲಭೆಗಳ ಹೆಚ್ಚಳ: ಅನಿಲ್ ಚೆರಿಯನ್‌

ಸಂವಿಧಾನ ಕಡೆಗಣನೆಯಿಂದಾಗಿ ದೇಶದಲ್ಲಿ ಕೋಮು ಗಲಭೆಗಳ ಹೆಚ್ಚಳ: ಅನಿಲ್ ಚೆರಿಯನ್‌


ಸುರತ್ಕಲ್: ಜಾತಿ, ಧರ್ಮಗಳ ಹೆಸರಿನಲ್ಲಿ ದೇಶವನ್ನು ಭಾಗ ಮಾಡಲು ಹವಣಿಸುತ್ತಿರುವಾಗ ಡಿವೈಎಫ್ಐ ಸುರತ್ಕಲ್ ಈ ಕಾರ್ಯಕ್ರಮದ ಮೂಲಕ ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹಳೆಯಂಗಡಿ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಅನಿಲ್ ಚೆರಿಯನ್‌ ಹೇಳಿದರು. 


ಅವರು ಇಂದು ಕುಳಾಯಿ ಮಹಿಳಾ ಮಂಡಲದಲ್ಲಿ ನಡೆದ ಡಿವೈಎಫ್‌ಐ ಸುರತ್ಕಲ್ ವತಿಯಿಂದ “ತುಳುನಾಡಿನ ಸಾಮರಸ್ಯದ ಪರಂಪರೆಯ ಉಳಿವಿಗಾಗಿ, ಕರಾವಳಿಯ ಕೋಮುಸೌಹಾರ್ದದ ರಕ್ಷಣೆಗಾಗಿ, ಜಾತಿ-ಮತ ಯಾವುದಾದರೇನು ಮನುಷ್ಯ ಒಳ್ಳೆಯವನಾಗಿದ್ದರೆ ಸಾಕು”ಎಂಬ ಸಂದೇಶ ಸಾರುವ ಸೌಹಾರ್ದ ಯುವ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಭಾರತದಲ್ಲಿ ಸಂವಿಧಾನ ಎಲ್ಲದಕ್ಕಿಂತಲೂ ಮಿಗಿಲಾದ ಸ್ಥಾನವನ್ನು ಪಡೆಯಬೇಕಿತ್ತು ಆದರೆ ಪ್ರಸ್ತುತ ಸಂವಿಧಾನವು ಜಾತಿ ಧರ್ಮಗಳಿಗಿಂತ ಕೀಳಾಗಿ ನೋಡಲಾಗುತ್ತಿದೆ ಇದರ ಪರಿಣಾಮ ದೇಶದಲ್ಲಿ ಕೋಮು ಕಲಬೆಗಳಂತಹ ಘಟನೆಗಳು ನಡೆಯುತ್ತಿವೆ ಎಂದರು.


ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದರು ಅದು ರಾಜಕೀಯಕಷ್ಟೇ ಸೀಮಿತವಾಗಿದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪ್ರಜಾಪ್ರಭುತ್ವ ಇಲ್ಲದಾಗಿದೆ. ಹಾಗಾಗಿ ದೇಶದಲ್ಲಿ ಜಾತಿ ಧರ್ಮಗಳನ್ನು ಮುಂದಿಟ್ಟು, ಗಲಭೆಗಳನ್ನು ನಡೆಸಲಾಗುತ್ತಿದೆ. ಜನರ ತಲೆಗೆ ವಿವೇಕ ವಿವೇಚನೆಯ ಬದಲಿಗೆ ಧರ್ಮ ಎಂಬ ವಿಷಯವನ್ನು ತುಂಬಲಾಗುತ್ತಿದೆ. ಇದನ್ನು ಸಾಂಸ್ಕೃತಿಕವಾಗಿ ಇಲ್ಲದಾಗಿಸಲು ವಿವಿಧ ಪ್ರಕಾರದ ಕಾರ್ಯಕ್ರಮಗಳ ಮೂಲಕ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಚರಿಯನ್ ನುಡಿದರು.


ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಧರ್ಮ‌ ಮತ್ತು ರಾಜಕೀಯ ಒಂದಾದಾಗ ಧರ್ಮ ಸಂಘರ್ಷಗಳು ಉಂಟಾಗುತ್ತವೆ. ಇದೇ ಪರಿಸ್ಥಿತಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಹಾಗಾಗಿ  ಮಂಗಳೂರಿನಲ್ಲಿ ಬದುಕುವುದು ಅಸಾಧ್ಯ ಎಂದ ಅವರು ಮಂಗಳೂರು ಸುರಕ್ಷಿತವಲ್ಲ ಎಂದು ಆತಂಕ‌ ವ್ಯಕ್ರಪಡಿಸಿದರು.


ಹಿಂದೂ ಧರ್ಮದಲ್ಲಿ ಕೊಲೆಗೀಡಾದವರೆಲ್ಲರೂ ರೌಡಿ ಶೀಟರ್ ಗಳು.‌ ಆದರೆ, ಪ್ರತಿಕಾರಕ್ಕಾಗಿ ಅಮಾಯಕ ಮುಸ್ಲಿಮರನ್ನು ಕೊಲೆ ಮಾಡಲಾಗುತ್ತಿದೆ. ಇಂತಹ ಘಟನೆಗಳು ಸಂಭವಿಸಿದಾಗ ಸಾರ್ವಜನಿಕರು ಮೌನವಾಗಿದ್ದು ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಬದಲು ಪ್ರತಿಕ್ರಿಸುವ, ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಹೀಗಾದರೆ ಮಾತ್ರ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.


ಡಿವೈಎಫ್‌ಐ ದ.ಕ.‌ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಮಂಗಳೂರು 7 ಗಂಟೆಗೆ ಸಂಫೂರ್ಣ ಸ್ತಬ್ದ ವಾಗುತ್ತಿದೆ.‌ ಕತ್ತಲಾಗುತ್ತಲೇ ಮನೆ ಸೇರುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯನ್ನು ಸರಿಪಡಿಸುವ ಕೆಲಸ‌ಆಗಬೇಕು.‌ ರಾಜಕೀಯ ಲಾಭಕ್ಕಾಗಿ ನಮ್ಮ ನಂಬಿಕೆಗಳು ಸೌಹಾರ್ದ ಬದುಕನ್ನು ಹೊಡೆದು ಹಾಕಲಾಗುತ್ತಿದೆ.  ಯಾವುದೇ ವೈಯಕ್ತಿಕ ದ್ವೇಷ ಇಲ್ಲದೆ ಇದ್ದರೂ ರಾಜಕೀಯ ದುರುದ್ದೇಶಕ್ಕಾಗಿ ದೇಶದಲ್ಲಿ ಹಿಂದೂ ಮುಸ್ಲಿಮರ ಐಕ್ಯತೆಗಾಗಿ ಹೋರಾಡುತ್ತಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯನ್ನು ನಾಥೂರಾಮ್‌ ಗೋಡ್ಸೆ  ಮೂಲಕ ಕೊಲ್ಲಿಸಿದ ದ್ವೇಷದ ರಾಜಕಾರಣವೇ ಅಬ್ದುಲ್ ರಹಿಮಾನ್ ನನ್ನೂ ಕೊಲೆ ಮಾಡಿದೆ ಎಂದರು.


ಉದ್ಯೋಗ, ಆರೋಗ್ಯ ಸಮಸ್ಯೆ‌, ಶಿಕ್ಷಣ ವ್ಯಾಪಾರೀಕರಣಗಳು ನಡೆಯುತ್ತಿದ್ದರೆ, ಅಸನ್ನು ಪ್ರಶ್ನಿಸಬೇಕಾಗಿರುವ ಯುವಕರನ್ನು ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ‌ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.

ಇದೇ ಸಂದರ್ಭ ಸೌಹಾರ್ದ ಸಾರುವ ಪೋಸ್ಟರ್ ಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು. 

ಕಾರ್ಯಕ್ರಮದಲ್ಲಿ ಕಾರ್ಮಿಕ‌ ಮುಖಂಡ ಸದಾಶಿವ ಶೆಟ್ಟಿ ಹೊಸಬೆಟ್ಟು, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಶ್‌ ಕುಮಾರ್ ಬಜಾಲ್, ವಕೀಲರು ಹಾಗೂ ಮೊಗವೀರ‌ ಸಮುದಾಯದ ಮುಖಂಡ ಗಂಗಾಧರ ಹೊಸಬೆಟ್ಟು, ಸಾಮಾಜಿಕ ಹೋರಾಟಗಾರ ಟಿ.ಎನ್. ರಮೇಶ್ ಮೊದಲಾದವರು ಮಾತನಾಡಿದರು. 

ಮಾಜಿ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಪಿಐಮ್ ಉತ್ತರ ಸಮಿತಿ ಕಾರ್ಯದರ್ಶಿ ಪ್ರಮೀಳಾ ಶಶಿಧರ್,ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷರಾದ ಅಶ್ರಫ್ ಬದ್ರಿಯಾ, ಮೂಡ ಸದಸ್ಯರಾದ ಅಬ್ದುಲ್ ಜಲೀಲ್ ಅದ್ದು,ಡಿವೈಎಫ್ ಐ ಮುಖಂಡರಾದ ಬಿಕೆ ಮಕ್ಸೂದ್, ಆಜ್ಮಲ್ ಅಹ್ಮದ್, ಆಶಾ ಬೈಕಂಪಾಡಿ, ಜೋಯ್ ರೋಷನ್ ಡಿಸೋಜಾ, ಉದಯ ಜನತಾಕಾಲನಿ, ತೌಸೀಫ್ ಅಂಗರಗುಂಡಿ, ಮುಸ್ತಫಾ ಬೈಕಂಪಾಡಿ, ನವಾಜ್ ಕುಲಾಯಿ,ಐ ಮೊಹಮ್ಮದ್, ಕಾಂಗ್ರೆಸ್ ಮುಂದಾಳುಗಳಾದ ರಾಜೇಶ್ ಕುಳಾಯಿ, ಹಿದಾಯತ್ ಬಿಕೆ,ಯಶವಂತ ಹೊಸಬೆಟ್ಟು, ಮೊಹಮ್ಮದ್ ಶರೀಫ್ ಕಾನ, ಕೊರಗ ಸಮುದಾಯದ ಮುಖಂಡರಾದ ಜಯ ಮಧ್ಯ, ಸಾಮಾಜಿಕ ಮುಂದಾಳುಗಳಾದ ಸಲೀಮ್ ಶಾಡೊ ಶರೀಫ್ ಜನತಾ ಕಾಲನಿ,ಶರೀಫ್ ಕುಳಾಯಿ, ಆಟೋ ರಿಕ್ಷಾ ಚಾಲಕರ ಸಂಘ ಸಿಐಟಿಯುನ ಲಕ್ಷ್ಮೀಷ ಅಂಚನ್ ಕುಲಾಯಿ, ಬಷೀರ್ ಕಾನ, ಹಂಝ ಮೈಂದಗುರಿ, ಅನಿಲ್ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article