
ಟ್ರೇಡ್ ಮಾರ್ಕೆಟ್ ಹೂಡಿಕೆ: 20 ಲಕ್ಷ ವಂಚನೆ
Sunday, June 8, 2025
ಉಡುಪಿ: ಟ್ರೇಡ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ನಂಬಿ ಮಣಿಪಾಲದ ಸರಳೇಬೆಟ್ಟಿನ ಜಯಂತ್ ಕುಮಾರ್ ಮೊಹಂತಿ (38) 20,37,200 ರೂ. ಕಳೆದುಕೊಂಡಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಟಿ ಗ್ರೂಪ್ ಆಫ್ ಕಂಪನಿ ಹೆಸರಿನ ಹೆಸರಿನ ಕಂಪೆನಿ ಹೆಚ್ಚಿನ ಲಾಭ ನೀಡುವುದಾಗಿ ಮೊಹಂತಿ ವಾಟ್ಸಾಪ್ ಸಂಖ್ಯೆಗೆ ಲಿಂಕ್ ಕಳಿಸಿ ಟ್ರೇಡ್ ಮಾರ್ಕೆಟ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಹಂತ ಹಂತವಾಗಿ 20,37,200 ರೂ.ಗಳನ್ನು ಹೂಡಿಕೆ ಮಾಡಿಸಿಕೊಂಡಿದ್ದಾರೆ. ಪ್ರಸ್ತುತ ಸರ್ವಿಸ್ ಚಾರ್ಜ್ ಅಕೌಂಟ್ ಕ್ಲಿಯರೆನ್ಸ್ ನೀಡದೇ ಹಣ ಮರುಪಾವತಿ ಮಾಡುವುದಿಲ್ಲ ಎಂದು ಹೇಳಿ ಹೂಡಿಕೆ ಮಾಡಿದ ಹಣವನ್ನು ಸಂಜಯ್ ಎಂಬಾತ ಮೋಸದಿಂದ ತನ್ನ ಖಾತೆಗೆ ವರ್ಗಾಯಿಸಿಕೊಂಡಿರುವ ಬಗ್ಗೆ ದೂರು ದಾಖಲಾಗಿದೆ