
ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ: ಓರ್ವನ ಬಂಧನ
Friday, June 6, 2025
ಉಡುಪಿ: ಇಲ್ಲಿನ 80 ಬಡಗುಬೆಟ್ಟು ಗ್ರಾಮದ ದಶರಥನಗರದ ಡಿ.ಕ್ಲಾಸಿಕೋ ಲಾಡ್ಜ್‌ನ ಒಂದನೇ ಮಹಡಿಯಲ್ಲಿ ಬಲವಂತವಾಗಿ ಮಹಿಳೆಯರನ್ನು ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ದಸ್ತಗಿರಿ ಮಾಡಲಾಗಿದೆ.
ವೇಶ್ಯಾವಾಟಿಕೆ ನಡೆಸುತ್ತಿರುವ ಮಾಹಿತಿ ಆಧರಿಸಿ ಶುಕ್ರವಾರ ಲಾಡ್ಜ್‌ಗೆ ದಾಳಿ ಮಾಡಿದ ಮಣಿಪಾಲ ಪೊಲೀಸರು ನೊಂದ ಮಹಿಳೆಯರನ್ನು ರಕ್ಷಿಸಿ, ಆರೋಪಿ ಬಿಹಾರ ಮೂಲದ ಚುಮಾನ್‌ರಾಮ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.