
ಕೊಲೆಗೀಡಾದ ರಹಿಒಂ ಮನೆಗೆ ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ಭೇಟಿ
Friday, June 6, 2025
ಬಂಟ್ವಾಳ: ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದ ತಂಡ ಮೇ.27 ರಂದು ಬಂಟ್ವಾಳ ತಾ.ನ ಇರಾಕೋಡಿಯಲ್ಲಿ ಹತ್ಯೆಯಾದ ಕೊಳತ್ತಮಜಲಿನ ಅಬ್ದುಲ್ ರಹಿಮಾನ್ ಮನೆಗೆ ಗುರುವಾರ ಸಂಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೆ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಉಪ್ಪಿನಂಗಡೊ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಾಜಿ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಸಾಹುಲ್ ಹಮೀದ್, ಎಂ.ಎ. ಗಫೂರ್, ಪಕ್ಷದ ಮುಖಂಡರಾದ ಅಬ್ಬಾಸ್ ಆಲಿ, ಉಲ್ಲಾಸ್ ಶೆಟ್ಟಿ, ಡಾ. ರಾಜಾರಾಮ್, ಸುರೇಶ್ ಜೋರ, ಲುಕ್ಮಾನ್ ಬಂಟ್ವಾಳ, ಚಿತ್ತರಂಜನ್ ಶೆಟ್ಟಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.