
ಈಡೇರದ ಸಮಸ್ಯೆ: ಗ್ರಾ.ಪಂ. ಸದಸ್ಯನಿಂದ ಜು.17 ರಿಂದ ಧರಣಿ
ಬಂಟ್ವಾಳ: ಸಜೀಪ ಮೂಡ ಗ್ರಾಮದ ಮೂಲ ಭೂತ ಸೌಲಭ್ಯಗಳಾದ ದಾರಿದೀಪ ದುರಸ್ತಿ ಮತ್ತು ಚರಂಡಿ ಹೂಳೆತ್ತುವ ಬಗ್ಗೆ ನೀಡಿರುವ ಮನವಿಗೆ ಸ್ಪಂದಿಸದ ಹಿನ್ನಲೆಯಲ್ಲಿ ಗ್ರಾ.ಪಂ. ಸದಸ್ಯ ನಾಸೀರ್ ಸಜೀಪ ಅವರು ತನ್ನ ಬೇಡಿಕೆ ಈಡೇರುವ ವರೆಗೆ ಜು.17ರಿಂದ ಪಂಚಾಯತ್ ಕಚೇರಿ ಮುಂಭಾಗ ಧರಣಿ ಕುಳಿತು ಕೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾರಿ ದೀಪ ದುರಸ್ತಿ ಹಾಗೂ ಚರಂಡಿ ಹೂಳೆತ್ತುವ ಬಗ್ಗೆ ಪಿಡಿಒ, ಆಡಳಿತ ಸಮಿತಿಗೆ ಸದಸ್ಯನ ನೆಲೆಯಲ್ಲಿ ಎರಡೆರಡು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.
ದಾರಿದೀಪ ಇಲ್ಲದೆ ಪರಿಸರ ಕತ್ತಲಲ್ಲಿ ಮುಳುಗಿದ್ದರೆ, ಚರಂಡಿಯ ಹೋಳೆತ್ತದೆ ಮಳೆ ನೀರು ಚರಿಂಡಿಯಲ್ಲಿ ಹರಿದು ಹೋಗದೆ ರಸ್ತೆಯಲ್ಲೇ ಅಪಾಯಕಾರಿ ಸ್ಥಿತಿಯಲ್ಲಿ ಹರಿಯುತ್ತಿದೆ. ಈ ಸಮಸ್ಯೆಯ ಪರಿಹರಿಸಲು ಗಡುವು ನೀಡಿದ್ದರೂ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ಮಾಡಿರುವುದರಿಂದ ಜು.17 ರಂದು ಬೆಳಗ್ಗೆ 10 ಗಂಟೆಯಿಂದ ಬೇಡಿಕೆ ಈಡೇರುವರೆಗೂ ಪಂಚಾಯತ್ ಕಚೇರಿ ಮುಂಭಾಗ ಧರಣಿ ಕುಳಿತುಕೊಳ್ಳುವುದಾಗಿ ಗ್ರಾ.ಪಂ. ಸದಸ್ಯ ನಾಸೀರ್ ಸಜೀಪ ಅವರು ಪಿಡಿಒ ಸಹಿತ ವಿವಿಧ ಇಲಾಧಿಕಾರಗಳಿಗೆ ಮನವಿ ಸಲ್ಲಿಸಿದ್ದಾರೆ.