
ರಿತುಪರ್ಣ ಅವರಿಗೆ ಮಹಿಳಾ ಸಂಘಟನೆಗಳಿಂದ ಸನ್ಮಾನ
Wednesday, July 16, 2025
ಮಂಗಳೂರು: ವಿಶ್ವದ ಪ್ರತಿಷ್ಠಿತ ‘ರೋಲ್ಸ್ ರಾಯ್ಸ್’ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಿತುಪರ್ಣ ಅವರ ನಿವಾಸಕ್ಕೆ ವಿವಿಧ ಮಹಿಳಾ ಪರ ಸಂಘಟನೆಗಳು ಭೇಟಿ ನೀಡಿ, ಅಭಿನಂದಿಸಿ, ಗೌರವಿಸಿದರು.
ಕಿರಿಯ ವಯಸ್ಸಿನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆದ ರಿತುಪರ್ಣ ಅವರ ಸಾಧನೆ ನಿಜಕ್ಕೂ ಶ್ಲಾಘನೀಯ. ಇವರ ಸಾಧನೆ ಇಂದಿನ ಪೀಳಿಗೆಗೂ ಮುಂದಿನ ತಲೆಮಾರಿಗೂ ಮಾದರಿಯಗಲಿ ಹಾಗೂ ಭವಿಷ್ಯದಲ್ಲಿ ರಿತುರವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದರು.
ಸಾಮರಸ್ಯ ಅಧ್ಯಕ್ಷೆ ಮಂಜುಳಾ ನಾಯಕ್, ಮದರ್ ತೆರೆಸಾ ವಿಚಾರ ವೇಧಿಕೆಯ ಫ್ಲೇವಿ ಕ್ರಾಸ್ತಾ, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಪ್ಪಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಶಿಕಲಾ ಪದ್ಮನಾಭ, ಸೇವಾದಳದ ಜಿಲ್ಲಾಧ್ಯಕ್ಷ ಅನಿತಾ ಕೆಪಿಟಿ, ಮಹಿಳಾ ಹೋರಾಟಗಾರ್ತಿ ಮೀನಾ ಟೆಲ್ಲಿಸ್, ಮಂಗಳೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸದಸ್ಯೆ ಶೈಲ ನೀತಾ ಡಿಸೋಜ, ಮಹಿಳಾ ಪರ ಸಂಘಟನೆಗಳ ಪದಾಧಿಕಾರಿಗಳಾದ ವಿದ್ಯಾ ಶೆಣೈ, ಅರ್ಚನಾ ಆಚರ್, ಸಾಮರಸ್ಯದ ಸದಸ್ಯರಾದ ನೀತ್ ಶರಣ್, ರಾಜೇಶ್ ದೇವಾಡಿಗ, ಟಿಸಿ ಗಣೇಶ್ ಮತ್ತಿತರು ಉಪಸ್ಥಿತರಿದ್ದರು.