
24 ಗಂಟೆಯೂ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿಯೂ ಕೊನೆಯ ಹಂತ: ಸ್ಪೀಕರ್ ಖಾದರ್
Saturday, July 12, 2025
ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, 10ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಕಾರ್ಯಗತವಾದ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ. ಖಾದರ್ ಅವರು ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪುದು ಗ್ರಾಮಕ್ಕೆ ಪ್ರಸ್ತುತ 2.10 ಕೋ.ರೂ. ಅನುದಾನ ನೀಡಿ ಶೀಘ್ರ ಅದರ ಕಾಮಗಾರಿಗಳು ಆರಂಭಗೊಳ್ಳಲಿದೆ. 24 ಗಂಟೆಯೂ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿಯೂ ಕೊನೆಯ ಹಂತದಲ್ಲಿದೆ ಎಂದರು.
ಸ್ಥಳೀಯ ಸಾಮಾಜಿಕ ಮುಂದಾಳು ಅಬೂಬಕ್ಕರ್ ಕುಂಜತ್ಕಳ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ. ಉಪಾಧ್ಯಕ್ಷ ಇಟ್ಬಾಲ್ ಸುಜೀರು, ಮಾಜಿ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ, ಮೊಹಮ್ಮದ್ ಹನೀಫ್, ತ್ವಾಹ ಜುಮಾ ಮಸೀದಿ ಅಧ್ಯಕ್ಷ ಎಸ್. ಹಸನಬ್ಬ, ಧರ್ಮಗುರು ರಹಮಾ ಶಾಫಿ ಕೊಡಗು, ಮಾಜಿ ತಾ.ಪಂ. ಸದಸ್ಯ ಇಕ್ಬಾಲ್ ದರ್ಬಾರ್, ಗ್ರಾ.ಪಂ. ಸದಸ್ಯರಾದ ಅಬೂಬಕ್ಕರ್ ನಝೀರ್, ಇಶಾಮ್ ಫರಂಗಿಪೇಟೆ, ರಝಾಕ್ ಅಮ್ಮೆಮಾರ್, ಇಟ್ಬಾಲ್ ಪಾಡಿ, ಹನ್ಸ್ ಅಮ್ಮೆಮಾರ್, ಜಿ.ಪಂ. ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಉದ್ಯಮಿ ಅಬ್ದುಲ್ ರಹಿಮಾನ್, ಸಫಾನ್ ಮತ್ತಿತರರು ಇದ್ದರು.
ಕೆ. ಮಹಮ್ಮದ್ ಮುಸ್ತಾಫ ಸ್ವಾಗತಿಸಿ, ಇರಾ ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.