
ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುವುದಿಲ್ಲ: ರೈ
ಬಂಟ್ವಾಳ: ಇಲ್ಲಿನ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 40 ವರ್ಷಗಳ ಅವಧಿಯಲ್ಲಿ ನಾನು ಶಾಸಕನಾಗಿ ಬಳಿಕ ಮಂತ್ರಿಯಾಗಿ ಅರ್ಹ ಫಲಾನುಭವಿಗಳಿಗೆ ಒಟ್ಟು 22 ಸಾವಿರಕ್ಕೂ ಮಿಕ್ಕಿ ಹಕ್ಕುಪತ್ರ ವಿತರಿಸಲಾಗಿದ್ದು, ಬಿಜೆಪಿ ಆಡಳಿತಾವಧಿಯಲ್ಲಿ ಇಂತಹ ಹೇಳಿಕೊಳ್ಳುವ ಸಾಧನೆಯೇ ಇಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ತಾಲೂಕಿನ ರಾಯಿ ಪೇಟೆಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಮತ್ತು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ‘ಜನಜಾಗೃತಿ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆ ಯಿಂದ ರಾಜ್ಯ ದಿವಾಳಿ ಆಗುವುದಿಲ್ಲ. ಆದರೆ ದೇಶದಲ್ಲಿ ಬ್ಯಾಂಕಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾದ ಬಂಡವಾಳಶಾಹಿಗಳಿಂದ ಮಾತ್ರ ದೇಶ ದಿವಾಳಿ ಗುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ‘ದೇಶದಲ್ಲಿ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಮಾತ್ರ ಜನತೆಗೆ ವಸತಿ, ಶಿಕ್ಷಣ, ಆರೋಗ್ಯ್, ರಸ್ತೆ, ಸಾರಿಗೆ, ಕುಡಿಯುವ ನೀರು ಮತ್ತಿತರರ ಮೂಲಭೂತ ಸೌಕರ್ಯ ಒದಗಿಸಿದೆ’ ಎಂದರು.
ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವಿಲ್ಮಾ ಮೊರಾಸ್, ಗ್ರಾಮ ಪಂಚಾಯಿತಿ ಸದಸ್ಯೆ ಶೋಭಾ ನೋಣಯ ಸಪಲ್ಯ, ಕಾಂಗ್ರೆಸ್ ವಲಯಾಧ್ಯಕ್ಷ ಮೋಹನ ಪೂಜಾರಿ, ಪ್ರಮುಖರಾದ ಕೆ.ಪಿ. ಲೋಬೊ, ನಾರಾಯಣ ಗೌಡ ಮಿಯಾಲು, ಕೆ. ರಮೇಶ ನಾಯಕ್ ರಾಯಿ, ಸುಧೀರ್ ಕುಮಾರ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಅನಿಲ್ ಕುಮಾರ್, ಚಂದ್ರಶೇಖರ ಆಚಾರ್ಯ, ರಾಮಚಂದ್ರ ಶೆಟ್ಟಿಗಾರ್, ಅನಿಲ್ ರೋಶನ್ ಡಿಸೋಜ ಮತ್ತಿತರರು ಇದ್ದರು.
ಬ್ಲಾಕ್ ಉಪಾಧ್ಯಕ್ಷ ಜಗದೀಶ್ ಕೊಯಿಲ ಸ್ವಾಗತಿಸಿ, ಮಾಜಿ ಎಪಿಎಂಸಿ ಸದಸ್ಯ ರಾಮಸುಂದರ ಗೌಡ ವಂದಿಸಿದರು.