
ರಸ್ತೆಯಲ್ಲಿದ್ದ ದನ ಕಳವುಗೈದು ಪರಾರಿ
Sunday, July 13, 2025
ಬಂಟ್ವಾಳ: ರಸ್ತೆಯ ಬದಿಯಲ್ಲಿ ಮೇಯಲು ಬಿಟ್ಟಿದ್ದ ಸಾಕು ದನವನ್ನು ಯಾರೋ ಕಾರಿಗೆ ತುಂಬಿಸಿ ಕಳವುಗೈದ ಘಟನೆ ನಾವೂರು ಶಾಲಾ ಬಳಿ ನಡೆದಿದೆ.
ಇಲ್ಲಿನ ಸೇಸಪ್ಪ ಎಂಬವರಿಗೆ ಸೇರಿದ ಸಾಕು ದನವನ್ನು ಅಪರಿಚಿತರು ಕಾರೊಂದರಲ್ಲಿ ತುಂಬಿಸಿ ಕಳವುಗೈದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆಯ ಕಂಪೌಂಡ್ ಹೊರಗಡೆ ರಸ್ತೆಯ ಬದಿಯಲ್ಲಿ ತನ್ನ ಸಾಕು ದನವನ್ನು ಮೇಯಲು ಬಿಟ್ಟಿದ್ದು, ಶನಿವಾರ ಮಧ್ಯರಾತ್ರಿ ಮನೆಯ ಹೊರಗೆ ಶಬ್ದ ಕೇಳಿದ ಸೇಸಪ್ಪ ಅವರ ಮಗ ಹೊರಗೆ ಬಂದು ನೋಡಿದಾಗ ಯಾರೋ ಅಪರಿಚಿತರು ದನವನ್ನು ಕಾರಿಗೆ ತುಂಬುತಿರುವುದನ್ನು ಕಂಡು ಬೊಬ್ಬೆ ಹಾಕಿದಾಗ ಮನೆಯವರು ಹೊರಗೆ ಬಂದು ತಢಯಲು ಯತ್ನಿಸಿದಾಗ ಅದಾಗಲೇ ದನವನ್ನು ಕಾರಿನಲ್ಲಿ ತುಂಬಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.