ಕಟೀಲು ತಾಳಮದ್ದಲೆ ಸಪ್ತಾಹ ಸಮಾರೋಪ

ಕಟೀಲು ತಾಳಮದ್ದಲೆ ಸಪ್ತಾಹ ಸಮಾರೋಪ


ಕಟೀಲು: ಕಳೆದ ಒಂದು ವಾರಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದ ವತಿಯಿಂದ ನಡೆಯುತ್ತಿದ್ದ 21ನೇ ವರ್ಷದ ತಾಳಮದ್ದಲೆ ಸಪ್ತಾಹ ಪಾಂಡವಾನಾಮ್ ಧನಂಜಯ ಭಾನುವಾರ ಸಮಾರೋಪ ಸಮಾರಂಭ ನಡೆಯಿತು.

ಯಕ್ಷಗಾನ ಸಂಘಟಕ ಮಧುಕರ ಭಾಗವತ್ ಮಾತನಾಡಿ ತಾಳಮದ್ದಲೆ ಸಂಘಟನೆ ಕಷ್ಟ. ಕಲಾವಿದರನ್ನು ಪ್ರಾಯೋಜಕರನ್ನು ಸಂಘಟಿಸಿ ಧಾರ್ಮಿಕ ಪ್ರಜ್ಞೆ ಬೆಳೆಸುವ ಕೆಲಸ ಅಭಿನಂದನೀಯ. ಆಟ ಕೂಟಗಳ ಮೂಲಕ ಕಟೀಲಿನ ಕೆಲಸ ದೊಡ್ದದು ಎಂದರು.

ಭುಜಬಲಿ ಧರ್ಮಸ್ಥಳ ಮಾತನಾಡಿ, ಕಟೀಲು ದೇಗುಲವು ಯಕ್ಷಗಾನಕ್ಕೆ ನೀಡುತ್ತಿರುವ ಕೊಡುಗೆ ಅನನ್ಯವಾದುದು. ಇದೀಗ ಏಳನೆಯ ಮೇಳ ಆಗುತ್ತಿರುವುದು 

ಅವುಗಳಿಂದ ನಾನಾ ಕಡೆ ಆಗುತ್ತಿರುವ ಆಟಗಳು, ತಾಳಮದ್ದಲೆ ಸಪ್ತಾಹಗಳು ಗಣನೀಯ ಎಂದರು.

ಕಟೀಲು ದೇಗುಲದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಯಕ್ಷಗಾನ ಸಂಘಟಕರಾದ ಭುಜಬಲಿ ಧರ್ಮಸ್ಥಳ, ಮಧುಕರ ಭಾಗವತ್, ಶಿಬರೂರಿನ ಪ್ರದುಮ್ನ ರಾವ್ ಕೈಯೂರ್ಗುತ್ತು, ಅತ್ತೂರು ಚರಣ್ ಶೆಟ್ಟಿ, ವಾಮಂಜೂರು ಗಣೇಶ ರೈ ಮತ್ತಿತರರು ಉಪಸ್ಥಿತರಿದ್ದರು.

ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ, ವಾಸುದೇವ ಶೆಣೈ ನಿರೂಪಿಸಿದರು.

ಬೆಳಗ್ಗೆಯಿಂದ ರಾತ್ರಿತನಕ ನವನಾರಾಯಣ ದರ್ಶನ ಹಾಗೂ ಕರ್ಣ ಅರ್ಜುನ ತಾಳಮದ್ದಲೆಗಳು ನಡೆದವು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article