
ಮೇಯಲು ಬಿಟ್ಟಿದ್ದ ಕರುಗಳ ಕಳವು: ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ
Friday, July 4, 2025
ಬಂಟ್ವಾಳ: ಮೇಯಲು ಬಿಟ್ಟಿದ್ದ 2 ವರ್ಷ ಪ್ರಾಯದ 2 ಗಂಡು ಕರುಗಳನ್ನು ರಿಡ್ಜ್ ಕಾರಿನಲ್ಲಿ ತುಂಬಿಸಿ ಕಳವುಗೈದು ಸಾಗಿಸಿರುವ ಘಟನೆ ಅಮ್ಮುಂಜೆ ಗ್ರಾಮದ ಕಲಾಯಿ ಎಂಬಲ್ಲಿ ನಡೆದಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮಲ್ಲೂರಿನ ಜಗದೀಶ್ ಕುಲಾಲ್ ಎಂಬವರು ಅವರಿಗೆ ಸೇರಿದ ಜಾಗದಲ್ಲಿ ಜೂ.28 ರಂದು ಹಸು ಹಾಗೂ ಕರುಗಳನ್ನು ಮೇಯಲು ಬಿಟ್ಟಿದ್ದರು.
ಈ ಎರಡು ಕರುಗಳು ಹಟ್ಡಿಗೆ ಬಾರದೆ ಕಾಣೆಯಾಗಿದ್ದು, ಎಲ್ಲಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ, ಬಳಿಕ ಅಮ್ಮುಂಜೆ ಗ್ರಾಮದ ಕಲಾಯಿ ಹೌಸ್ ರಸ್ತೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಜೂ.29 ರಂದು ಬೆಳಗ್ಗಿನ ಜಾವ 4.30 ಗಂಟೆಗೆ ಜಗದೀಶ್ ಅವರ ಎರಡು ಗಂಡು ಕರುಗಳನ್ನು ಇಬ್ಬರು ರಿಡ್ಜ್ ಕಾರಿನಲ್ಲಿ ತುಂಬಿಸಿ ಸಾಗಿಸುವ ದೃಶ್ಯ ಸೆರೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.