
ಅನಾರೋಗ್ಯದಿಂದ ಯುವತಿ ಸಾವು
Wednesday, July 30, 2025
ಕಡಬ: ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಡಬ ತಾಲೂಕಿನ ಕುಂತೂರು ಗ್ರಾಮದ ಇಡಾಳ ನಿವಾಸಿ ಕರಿಯಪ್ಪ ಯಾನೆ ಕೇಶವ ಗೌಡ ಅವರ ಪುತ್ರಿ ಶ್ವೇತಾ (23) ಅವರು ಜು. 28ರಂದು ನಿಧನಹೊಂದಿದರು.
ಆರಂಭದಲ್ಲಿ ಜ್ವರ ಕಾಣಿಸಿಕೊಂಡು ಬಳಿಕ ಕಿಡ್ನಿ ಸಂಬಂಧಿ ಅನಾರೋಗ್ಯ ಪತ್ತೆಯಾಗಿತ್ತು.
ಜು. 28ರಂದು ಬೆಳಗ್ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಆಲಂಕಾರಿನ ಖಾಸಗಿ ಕ್ಲಿನಿಕ್‌ಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪುತ್ತೂರು ತಲುಪುವ ವೇಳೆಗೆ ಮೃತ ಪಟ್ಟಿದ್ದರು. ಮೃತರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.