ಸಾರ್ವಜನಿಕರಿಗಾಗಿ ಹೃದಯ ಪುನಶ್ಚೇತನ ಮಾಹಿತಿ ಮತ್ತು ತರಬೇತಿ

ಸಾರ್ವಜನಿಕರಿಗಾಗಿ ಹೃದಯ ಪುನಶ್ಚೇತನ ಮಾಹಿತಿ ಮತ್ತು ತರಬೇತಿ


ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಧರ್ಮಸ್ಥಳ ಇವರ ಸಂಯುಕ್ತ ಆಶ್ರಯದಲ್ಲಿ ಜು.27 ರಂದು CPR ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಅಗಸ್ಟೀನ್ ಟಿ.ಎ. ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರೆವ್. ಫಾ. ಸುನಿಲ್ ಪೂವತಿಂಗಲ್ ಉಪಸ್ಥಿತರಿದ್ದರು.

ತರಬೇತಿಯನ್ನು ನೀಡಲು ಎಸ್‌ಡಿಎಂ ಮಲ್ಟಿಸ್ಪೆಲಾಲಿಟಿ ಆಸ್ಪತ್ರೆಯ ನರ್ಸಿಂಗ್ ಸೂಪೆರಿಂಟೆಂಡೆಂಟ್ ಶೆರ್ಲಿ ಮತ್ತು ಅವರ ವೈದ್ಯಕೀಯ ತಂಡ ಹಾಜರಿದ್ದರು. ಅವರು ಸಾಮಾನ್ಯ ಜನರಿಗೆ CRP ತಂತ್ರಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಪ್ರಾಯೋಗಿಕವಾಗಿ ತರಬೇತಿಯನ್ನೂ ನೀಡಿದರು.

ಸಂಘದ ಕಾರ್ಯದರ್ಶಿ ಶಿಜೋ ಜೋಸೆಫ್ ಸ್ವಾಗತಿಸಿ, ನಿರೂಪಿಸಿದರು. ಉಪಾಧ್ಯಕ್ಷ ಮ್ಯಾಥ್ ವಿ.ಟಿ., ಕೋಶಾಧಿಕಾರಿ ರಂಜಿತ್ ಪಿ.ಎಸ್., ಸಂಘದ ಇತರ ಸದಸ್ಯರು ಹಾಗೂ ಊರಿನ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಮಾಹಿತಿ ಮತ್ತು ತರಬೇತಿಯನ್ನು ಪಡೆದುಕೊಂಡರು.

ಈ ಕಾರ್ಯಕ್ರಮ ಜನಜಾಗೃತಿ ಮೂಡಿಸಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಲು ಅತ್ಯಂತ ಪರಿಣಾಮಕಾರಿ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article