ಆ.2 ರಂದು ‘ಆಟಿದ ಬೂತಾರಾದನೆ’ ಸಾಕ್ಷ್ಯ ಚಿತ್ರ ಬಿಡುಗಡೆ ಮತ್ತು ವಿಚಾರಗೋಷ್ಠಿ

ಆ.2 ರಂದು ‘ಆಟಿದ ಬೂತಾರಾದನೆ’ ಸಾಕ್ಷ್ಯ ಚಿತ್ರ ಬಿಡುಗಡೆ ಮತ್ತು ವಿಚಾರಗೋಷ್ಠಿ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ‘ಆಟಿದ ಬೂತಾರಾದನೆ’ ಬಗ್ಗೆ ಸಾಕ್ಷ್ಯ ಚಿತ್ರ ಬಿಡುಗಡೆ ಮತ್ತು ವಿಚಾರಗೋಷ್ಠಿ ಆ.2 ರಂದು ಮಧ್ಯಾಹ್ನ 2 ಗಂಟೆಗೆ ಮಂಗಳೂರಿನ ತುಳು ಭವನದಲ್ಲಿ ನಡೆಯಲಿದೆ.

ಪತ್ರಕರ್ತ ರಮೇಶ್ ಮಂಜೇಶ್ವರ ಅವರು ದಾಖಲೀಕರಣ ಮಾಡಿರುವ ಆಟಿಯ ಭೂತಾರಾಧನೆಯ ಸಾಕ್ಷ್ಯ ಚಿತ್ರವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು ಹಾಗೂ ಹಿರಿಯ ಜಾನಪದ ವಿದ್ವಾಂಸರಾದ ಡಾ. ವೈ.ಎನ್. ಶೆಟ್ಟಿ ಅವರು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ವಹಿಸಲಿದ್ದಾರೆ.

ಸಾಕ್ಷ್ಯಚಿತ್ರ ಬಿಡುಗಡೆ ನಂತರ ‘ಆಟಿದ ಬೂತಾರಾದನೆ, ನೇಮದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಪೆರುವಾಯಿಯ ಮೂವರು ದೈವಂಗಳು ದೈವಸ್ಥಾನದ ಗುರಿಕಾರರಾದ ಸುಬ್ರಮಣ್ಯ ಭಟ್ ಕೆ.ಜೆ., ಪೆರುವಾಯಿಯ ನಿವೃತ್ತ ಶಿಕ್ಷಕರಾದ ಎಂ.ಕೆ. ಕುಕ್ಕಾಜೆ ವಿಚಾರ ಮಂಡಿಸುವರು.

ಕುಂಬಳೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಮಳಿ ನಾರಾಯಣ ಗಟ್ಟಿ, ಪೆರುವಾಯಿ ದೈವಾರಾದಕರಾದ ಆನಂದ ನಲಿಕೆ, ದೈವರಾಧಕರಾದ ಐತಪ್ಪ ಆರಿಕ್ಕಾಡಿ ಕುಂಬಳೆ, ಪೆರುವಾಯಿಯ ಪ್ರಗತಿ ಪರ ಕೃಷಿಕ ರಾಜೇಂದ್ರನಾಥ್ ರೈ ಇವರು ವಿಚಾರಗೋಷ್ಠಿ ಬಗ್ಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article