ಪರಶುರಾಮನ ಪ್ರತಿಮೆ ಕಂಚಿನದ್ದು ಅಲ್ಲ ಎಂದು ಸಾಬೀತಾದರೂ ಸಮರ್ಥನೆ ಧರ್ಮ ದ್ರೋಹಕ್ಕೆ ಸಮಾನ

ಪರಶುರಾಮನ ಪ್ರತಿಮೆ ಕಂಚಿನದ್ದು ಅಲ್ಲ ಎಂದು ಸಾಬೀತಾದರೂ ಸಮರ್ಥನೆ ಧರ್ಮ ದ್ರೋಹಕ್ಕೆ ಸಮಾನ

ಕಾರ್ಕಳ: ಪರಶುರಾಮನ ಪ್ರತಿಮೆ ಕಂಚಿನಿಂದ ನಿರ್ಮಾಣ ಮಾಡದೆ ವಂಚಿಸಲಾಗಿದೆ, ಅದರ ಅರ್ಧ ಮೇಲ್ಭಾಗ ನಾಲ್ಕು ತಿಂಗಳ ಕಾಲ ಬೇರೆ ಸ್ಥಳದಲ್ಲಿ ಅಡಗಿಸಿಟ್ಟು ಓಳಸಂಚು ರೂಪಿಸಲಾಗಿತ್ತು ಎಂದು ವಂಚನೆ, ನಂಬಿಕೆ ದ್ರೋಹ, ಒಳಸಂಚು ಹಾಗೂ ಸಾಕ್ಷಿನಾಶ ಎಂಬ ಗಂಬೀರ ಆರೋಪ ಹೋರಿಸಿ ಪೊಲೀಸರು ನ್ಯಾಯಾಲಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಇದರಿಂದ ಪ್ರತಿಮೆಯ ನೈಜ್ಯತೆಯ ಬಗ್ಗೆ ಇರುವ ಗೊಂದಲಕ್ಕೆ ಸಾಕ್ಷೀ ಸಹಿತವಾದ ಉತ್ತರ ಸಿಕ್ಕಿದೆ ಆದರೆ ಬಿಜೆಪಿ ಕೆಲ ನಾಯಕರು ಇನ್ನೂ ಸಮರ್ಥನೆ ಮಾಡುತ್ತಿದ್ದು ಇದು ಧರ್ಮ ದ್ರೋಹದ ಕೆಲಸವಾಗಿದೆ ಅವರಿಗೆ ಇನ್ನೂ ಮಾನ ಉಳಿದಿದ್ದರೆ ಬೈಲೂರಿನ ಮಾರಿಗುಡಿಗೆ ಬಂದು ಪ್ರಮಾಣಿಸಲಿ ನಾವೂ ಸಿದ್ದರಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ ಸವಾಲು ಹಾಕಿದ್ದಾರೆ.

ಪ್ರತಿಮೆ ಕಂಚಿನಿಂದಲೇ ಮಾಡಿದ್ದರೆ ವಂಚನೆ, ನಂಬಿಕೆ ದ್ರೋಹ, ಒಳಸಂಚು, ಮತ್ತು ಸಾಕ್ಷಿ ನಾಶ ದಂತಹ ಗಂಬೀರ ಆರೋಪಗಳು ಯಾಕೆ ಬರುತಿದ್ದವು? ಕೇವಲ ಒಂದು ಕಂಚಿನ ಪ್ರತಿಮೆ ನಿರ್ಮಾಣವಾಗಿದ್ದರೆ ಬೆಟ್ಟದ ಮೇಲೊಂದು ಠಾಣೆಯಲ್ಲಿ ಮತ್ತೊಂದು ಇರಲು ಹೇಗೆ ಸಾಧ್ಯ? ಹಾಗೂ ಅದನ್ನು ಕಂಚಿನಿಂದಲೇ ಮಾಡಿದ್ದರೆ ರಾತ್ರಿ ಕಳ್ಳರ ಹಾಗೆ ಕೊಂಡೊಯ್ದು ನಾಲ್ಕು ತಿಂಗಳ ಕಾಲ ಅಡಗಿಸಿ ಇಡುವ ಅಗತ್ಯವಿತ್ತೇ ಎನ್ನುವ ಪ್ರಶ್ನೆಗೆ ಉತ್ತರವಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಅಡಗಿಸಿ ಇಡಲಾಗಿದ್ದ ಪ್ರತಿಮೆಯ ಮೇಲಿನ ಅರ್ಧ ಭಾಗ ಯಾವುದರಿಂದ ಮಾಡಲಾಗಿತ್ತು ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಸಾಕ್ಷಿ ನಾಶವೆಂದರೆ ಆ ಅರ್ಧ ಭಾಗ ಏನು ಮಾಡಲಾಗಿದೆ ಎನ್ನುವ ಬಗ್ಗೆಯೇ ಅಲ್ಲವೇ? ಅದು ಪತ್ತೆಯಾದರೆ ಅದರ ಸತ್ಯಾಸತ್ಯತೆ ಇನ್ನೂ ಆಶ್ಚರ್ಯಕರವಾಗಿರಬೇಕಲ್ಲವೇ? ರಾಜ್ಯದ ಮುಖ್ಯಮಂತ್ರಿಗಳು ಅಂದು ಉದ್ಘಾಟಿಸಿದ್ದ ಪ್ರತಿಮೆ ಕಂಚಿನದ್ದು ಆಗಿರಲೇ ಇಲ್ಲ ಎನ್ನುವುದು ನಮ್ಮ ಅರೋಪವಾಗಿತ್ತು ಈಗ ಅದೇ ಸತ್ಯವಾಗಿದೆ ಬಿಜೆಪಿಯ ನಾಯಕರು ಅನಾವಶ್ಯಕ ಹೇಳಿಕೆಗಳನ್ನು ಕೊಡುವ ಬದಲು ಪ್ರತಿಮೆ ಕಂಚಿನದ್ದೇ ಎಂದು ದೃಡ ನಂಬಿಕೆ ಮತ್ತು ಧೈರ್ಯವಿದ್ದರೆ ಬೈಲೂರು ಮಾರಿಗುಡಿಗೆ ಬಂದು ಪ್ರಮಾಣಿಸಲಿ ನಾವು ಸಿದ್ದರಿದ್ದೇವೆ ಪ್ರತಿಮೆ ಕಂಚಿನದ್ದು ಅಲ್ಲ ಪೈಬರ್ ಬಳಸಲಾಗಿತ್ತು ಎಂದು ನಾವು ಹೇಳಲು ಸಿದ್ದ ಪ್ರತಿಮೆ ಕಂಚಿನಿಂದಲೇ ಮಾಡಲಾಗಿತ್ತು ಪೈಬರ್ ಬಳಸಿಲ್ಲ ಎಂದು ದೇವರ ಮುಂದೆ ಹೇಳಲು ನೀವು ಸಿದ್ದರಿದ್ದೀರಾ? ಎಂದು ಸವಾಲು ಹಾಕಿದ್ದಾರೆ. 

ಎರಡು ವರ್ಷದಲ್ಲಿ ಪ್ರತಿಮೆ ಕಂಚಿನದ್ದು ಅಲ್ಲವೆಂದು ಜಗತ್ತಿಗೆ ತಿಳಿಯಿತು ಇನ್ನೂ ಸ್ವಲ ದಿನದಲ್ಲಿ ಉಳಿದ ಅರ್ಧ ಕಾಣೆಯಾದ ಪ್ರತಿಮೆ ಪೈಬರ್‌ನಿಂದಲೇ ಮಾಡಲಾಗಿತ್ತು ಎನ್ನುವುದೂ ಸಾಬಿತ್ತಾಗುತ್ತದೆ ಎಂದರು. 

ಕಾರ್ಯಕರ್ತರ ಸಮಾದಾನಕ್ಕೆ ನೀಡುವ ಹೇಳಿಕೆಗಳಿಂದ ಸತ್ಯ ಬದಲಾಗುವುದಿಲ್ಲ ಆದರೆ ಪ್ರಮಾಣದಿಂದ ಪ್ರತಿಮೆಯ ಬಗ್ಗೆ ಇರುವ ಅರೋಪ ಪ್ರತ್ಯಾರೋಪಗಳು ಇಂದೇ ಕೊನೆಯಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article