
ಬಸ್ರೂರು ಸಾಮೂಹಿಕ ಚೂಡಿ ಪೂಜೆ
Tuesday, July 29, 2025
ಕುಂದಾಪುರ: ಬಸ್ರೂರಿನ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸ್ವಸಮಾಜದ ಸುಮಂಗಲಿಯರಿಂದ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸಾಮೂಹಿಕ ಚೂಡಿ ಪೂಜಾ ಕಾರ್ಯಕ್ರಮ ಅ.3 ರಂದು ನಡೆಯಲಿದೆ.
ಬೆಳಗ್ಗೆ 11 ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಚೂಡಿ ಪೂಜೆ ಆರಂಭಗೊಳ್ಳುವುದು, ಚೂಡಿ ಪೂಜೆಯ ಬಳಿಕ ಭಜನಾ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಮಹಾ ಪೂಜೆ, ಪ್ರಸಾದ ವಿತರಣೆ, ಸಮಾರಾಧನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.